ಅಶ್ಲೀಲ ಚಿತ್ರ ತಯಾರಿ ಪ್ರಕರಣ: 2 ತಿಂಗಳ ನಂತರ ಮುಂಬೈ ಜೈಲಿನಿಂದ ಹೊರಬಂದ ರಾಜ್ ಕುಂದ್ರಾ

ಮುಂಬೈ: ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂಬ ನೆಲೆಯಲ್ಲಿ ಎರಡು ತಿಂಗಳ ಹಿಂದೆ ಬಂಧಿಸಲ್ಪಟ್ಟಿರುವ ಉದ್ಯಮಿ ರಾಜ್ ಕುಂದ್ರಾಗೆ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದ ಒಂದು ದಿನದ ನಂತರ ಮಂಗಳವಾರ ಮುಂಬೈ ಜೈಲಿನಿಂದ ಹೊರ ಬಂದರು.
ಕುಂದ್ರಾ ಅವರು ಆರ್ಥರ್ ರೋಡ್ ಜೈಲಿನಿಂದ ಬೆಳಿಗ್ಗೆ 11.30 ರ ನಂತರ ಬಿಡುಗಡೆಯಾದರು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ. ಭಾಜಿಪಾಲೆ ಅವರು ಸೋಮವಾರ 50,000 ರೂ. ಬಾಂಡ್ ಮೇಲೆ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಗೆ ಅನುಮತಿ ನೀಡಿದರು.
ಕುಂದ್ರಾ ಅವರ ಸಹವರ್ತಿ ಹಾಗೂ ಸಹ-ಆರೋಪಿ ರಯಾನ್ ಥಾರ್ಪೆ ಅವರನ್ನು ಜುಲೈ 19 ರಂದು ಬಂಧಿಸಲಾಗಿತ್ತು, ಅಶ್ಲೀಲ ಚಿತ್ರಗಳ ಸೃಷ್ಟಿ ಹಾಗೂ ಕೆಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ನೀಡಿದೆ.
46 ವರ್ಷದ ಉದ್ಯಮಿ ರಾಜ್ ಕುಂದ್ರಾ ಸೆಂಟ್ರಲ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
Next Story