ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಟಿ.ನಟರಾಜನ್ ಗೆ ಕೊರೋನ ಪಾಸಿಟಿವ್

photo: twitter.com/SunRisers
ಹೊಸದಿಲ್ಲಿ: ಯುಎಇನಲ್ಲಿ ಈಗ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ನಲ್ಲೂ ಕೋವಿಡ್ ಬಿಕ್ಕಟ್ಟು ಕಾಣಿಸಿಕೊಂಡಿದೆ.
ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂದ್ಯ ನಿಗದಿಯಾಗಿದ್ದು ಇದಕ್ಕೂ ಮೊದಲೇ ಹೈದರಾಬಾದ್ ತಂಡದ ಬೌಲರ್ ಟಿ.ನಟರಾಜನ್ ಗೆ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಆಗಿದೆ. ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಪ್ರತ್ಯೇಕವಾಗಿಡಲಾಗಿದೆ ಎಂದು NDTV ವರದಿ ಮಾಡಿದೆ.
ಹೈದರಾಬಾದ್ ತಂಡ ಐಪಿಎಲ್ 2021 ಅಭಿಯಾನವನ್ನು ಬುಧವಾರ ದುಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪುನರಾರಂಭಿಸಲಿದೆ. ಇನ್ನೊಬ್ಬ ಹೈದರಾಬಾದ್ ಆಟಗಾರ ವಿಜಯ್ ಶಂಕರ್ ಹಾಗೂ ಐದು ಜನ ಸಹಾಯಕ ಸಿಬ್ಬಂದಿ ನಟರಾಜನ್ ರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆಂದು ಗುರುತಿಸಲಾಗಿದೆ ಹಾಗೂ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ವಿಜಯ್ ಶಂಕರ್ ( ಆಟಗಾರ), ವಿಜಯ್ ಕುಮಾರ್ (ತಂಡದ ವ್ಯವಸ್ಥಾಪಕ), ಶ್ಯಾಮ್ ಸುಂದರ್ ಜೆ. (ಫಿಸಿಯೋಥೆರಪಿಸ್ಟ್), ಅಂಜನಾ ವನ್ನನ್ ( ಡಾಕ್ಟರ್), ತುಷಾರ್ ಖೇಡ್ಕರ್ (ಲಾಜಿಸ್ಟಿಕ್ಸ್ ಮ್ಯಾನೇಜರ್) ಪೆರಿಯಸಾಮಿ ಗಣೇಶನ್ (ನೆಟ್ ಬೌಲರ್) ಅವರನ್ನು ಪ್ರತ್ಯೇಕಿಸಲಾಗಿದೆ.