ಒಡಿಶಾ: 20 ನಾಯಿಗಳಿಗೆ ವಿಷಪ್ರಾಶನ, ಓರ್ವನ ಬಂಧನ

ಕಟಕ್ (ಒಡಿಶಾ): ಒಡಿಶಾದ ಕಟಕ್ ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ ಕನಿಷ್ಠ 20 ಬೀದಿ ನಾಯಿಗಳಿಗೆ ವಿಷ ನೀಡಿ ಸಾಯಿಸಿದ ಆರೋಪದ ಮೇಲೆ 24 ವರ್ಷದ ಮಾಂಸ ಮಾರಾಟಗಾರನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಕನಿಷ್ಠ 10 ನಾಯಿಗಳ ಕಳೇಬರಗಳನ್ನು ಹತ್ತಿರದ ಹಳ್ಳದಲ್ಲಿ ಪತ್ತೆ ಹಚ್ಚಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕಟಕ್ ನಗರದಿಂದ ಉತ್ತರಕ್ಕೆ 13 ಕಿ.ಮೀ. ಉತ್ತರದಲ್ಲಿರುವ ಟಂಗಿ-ಚೌದ್ವಾರ್ ಬ್ಲಾಕ್‌ನ ಶಂಕರಪುರ ಗ್ರಾಮದ ಮಾರುಕಟ್ಟೆಯ ಸುತ್ತಲೂ ಹೆಚ್ಚಿನ ನಾಯಿಗಳ ಕಳೇಬರಗಳನ್ನು ಪತ್ತೆ ಹಚ್ಚಿದ್ದರು.
ರಾತ್ರಿಯಲ್ಲಿ ನಾಯಿಗಳು ಬೊಗಳುವುದು ಹಾಗೂ ಅವು ಸೃಷ್ಟಿಸಿದ ಅವ್ಯವಸ್ಥೆಯಿಂದಾಗಿ ಸಿಟ್ಟಿಗೆದ್ದು ಅವುಗಳಿಗೆ ವಿಷಯುಕ್ತ ಆಹಾರವನ್ನು ನೀಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story