Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದು,...

ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದು, ಅಂಕಿಅಂಶಗಳ ಮೂಲಕ 'ಲವ್‌, ನಾರ್ಕೋಟಿಕ್‌ ಜಿಹಾದ್ʼ ಸತ್ಯ ಬಿಚ್ಚಿಟ್ಟ ಸಿಎಂ ಪಿಣರಾಯಿ

"ಡ್ರಗ್ಸ್ ಕಳ್ಳಸಾಗಣಿಕೆ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ"

ವಾರ್ತಾಭಾರತಿವಾರ್ತಾಭಾರತಿ23 Sept 2021 4:19 PM IST
share
ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದು, ಅಂಕಿಅಂಶಗಳ ಮೂಲಕ ಲವ್‌, ನಾರ್ಕೋಟಿಕ್‌ ಜಿಹಾದ್ʼ ಸತ್ಯ ಬಿಚ್ಚಿಟ್ಟ ಸಿಎಂ ಪಿಣರಾಯಿ

ಹೊಸದಿಲ್ಲಿ: ಪಾಲ ಬಿಷಪ್ ಜೋಸೆಫ್ ಕಲ್ಲರಂಗಟ್ಟ್  ಅವರ `ನಾರ್ಕಾಟಿಕ್ ಎಂಡ್ ಲವ್ ಜಿಹಾದ್' ಹೇಳಿಕೆ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದರಲ್ಲದೆ ಇಂತಹ ಹೇಳಿಕೆಗೆ ಯಾವುದೇ ಆಧಾರವಿಲ್ಲ ಹಾಗೂ  ಧಾರ್ಮಿಕ ಮತಾಂತರ ಮತ್ತು ಡ್ರಗ್ಸ್ ಕಳ್ಳಸಾಗಣಿಕೆ  ಕುರಿತಾದ ಅಂಕಿಅಂಶಗಳನ್ನು ಪರಿಶೀಲಿಸಿದಾಗ ರಾಜ್ಯದ ಅಲ್ಪಸಂಖ್ಯಾತ ಧರ್ಮಗಳು ಅದರಲ್ಲಿ ಯಾವುದೇ ವಿಶೇಷ ಶಾಮೀಲಾತಿ ಹೊಂದಿಲ್ಲ ಎಂದು ತಿಳಿದು ಬರುತ್ತದೆ ಎಂದರು.

"ರಾಜ್ಯದಲ್ಲಿ 2020ರಲ್ಲಿ  ನಾರ್ಕಾಟಿಕ್ ಡ್ರಗ್ಸ್ ಎಂಡ್ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸಸ್ ಆಕ್ಟ್ ಅನ್ವಯ 4,941 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ 5,422 ಆರೋಪಿಗಳ ಪೈಕಿ 2,700 (ಶೇ 49.80) ಹಿಂದುಗಳು, 869 (ಶೇ 34.47) ಮುಸ್ಲಿಮರು ಮತ್ತು 853 (ಶೇ 15.73) ಕ್ರೈಸ್ತರಾಗಿದ್ದಾರೆ. ಈ ಅನುಪಾತದಲ್ಲಿ ಯಾವುದೇ ಅಸಹಜತೆಯಿಲ್ಲ, ಡ್ರಗ್ಸ್ ಕಳ್ಳಸಾಗಣಿಕೆ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ," ಎಂದರು.

ಕ್ರೈಸ್ತ ಮತ್ತು ಇತರ ಸಮುದಾಯಗಳ ಮಹಿಳೆಯರನ್ನು ಮದುವೆಯ ನೆಪದಲ್ಲಿ ಸೆಳೆದು ನಂತರ ಮತಾಂತರಿಸಿ ಇಸ್ಲಾಮಿಕ್ ಸ್ಟೇಟ್‍ನಂತಹ ಉಗ್ರ ಸಂಘಟನೆಗಳಿಗೆ ಸೇರಿಸಲಾಗುತ್ತದೆ ಎಂಬ ಆರೋಪಗಳನ್ನೂ ಅವರು ಅಂಕಿಅಂಶಗಳನ್ನು ಉಲ್ಲೇಖಿಸಿ ನಿರಾಕರಿಸಿದ್ದಾರೆ.

2019ರ ತನಕ ಕೇರಳದಿಂದ ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆನ್ನಲಾದವರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು  100 ಮಂದಿ ಕೇರಳಿಗರ ಪೈಕಿ 72 ಮಂದಿ  ವೃತ್ತಿಗೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂಧ ಆಕರ್ಷಿತರಾಗಿ  ಸಂಘಟನೆ ಸೇರಿದ್ದಾರೆ. ಇವರ ಪೈಕಿ ಕೊಝಿಕ್ಕೋಡ್‍ನ ತುರುತ್ತಿಯಾಡ್ ಎಂಬಲ್ಲಿನ ದಾಮೋದರನ್ ಅವರ ಪುತ್ರ ಪ್ರಜು ಹೊರತುಪಡಿಸಿ ಎಲ್ಲರೂ ಮುಸ್ಲಿಂ ಸಮುದಾಯದವರಾಗಿದ್ದಾರೆ.  ಉಳಿದ 28 ಮಂದಿ ಇಲ್ಲಿರುವಾಗಲೇ ಐಎಸ್ ಸಿದ್ಧಾಂತದಿಂದ ಆಕರ್ಷಿತರಾಗಿ ಕೇರಳ ತೊರೆದಿದ್ದಾರೆ" ಎಂದರು. 

ಈ 28 ಮಂದಿಯ ಪೈಕಿ ತಿರುವನಂತಪುರಂನ ಹಿಂದು ಮಹಿಳೆಯೊಬ್ಬರು ಪಾಲಕ್ಕಾಡ್‍ನ ಕ್ರೈಸ್ತ ವ್ಯಕ್ತಿಯನ್ನು ವಿವಾಹವಾಗಿದ್ದರೆ ಕ್ರೈಸ್ತ ವ್ಯಕ್ತಿಯನ್ನೇ ವಿವಾಹವಾಗಿದ್ದ ಎರ್ಣಾಕುಳಂನ ಕ್ರೈಸ್ತ ಮಹಿಳೆ ಕೂಡ ಸೇರಿದ್ದಾರೆ. ಅವರು ವಿವಾಹ ನಂತರ ಇಸ್ಲಾಂಗೆ ಮತಾಂತರಗೊಂಡು ಐಎಸ್ ಸೇರಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದರು.

ಬಿಷಪ್ ಜೋಸೆಫ್ ಕಲ್ಲರಂಗಟ್ಟ್ ಅವರ ಹೇಳಿಕೆ ಕೇರಳ ಸಮಾಜವನ್ನು ಪ್ರತಿಫಲಿಸುವುದಿಲ್ಲ ಹಾಗೂ ಅವರು  ಈ ವಿಚಾರದಲ್ಲಿ ಜನರ ನಿಲುವನ್ನು ಅರ್ಥೈಸಿಕೊಂಡು  ಪ್ರತಿಕ್ರಿಯಿಸುತ್ತಾರೆಂಬ ಆಶಾವಾದವನ್ನು ಪಿಣರಾಯಿ ವ್ಯಕ್ತಪಡಿಸಿರು. ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಸೀಎಂ, ಹೇಳಿಕೆಯನ್ನು ರಾಜಕೀಯ ಪಕ್ಷಗಳಿಗೆ ಸೇರಿದವರು ಯಾರೂ ಮಾಡಿಲ್ಲ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X