ನೇತ್ರಾವತಿ ನದಿಗೆ ತ್ಯಾಜ್ಯ ಎಸೆತ: ದೂರು
ಮಂಗಳೂರು, ಸೆ.23: ಜಪ್ಪಿನಮೊಗರು ನೇತ್ರಾವತಿ ಬ್ರಿಡ್ಜ್‌ನಲ್ಲಿ ಲಾರಿಯನ್ನು ನಿಲ್ಲಿಸಿ, ನದಿಗೆ ತ್ಯಾಜ್ಯ ಎಸೆದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ.22ರಂದು ಮಧ್ಯಾಹ್ನ 1ಗಂಟೆಗೆ ಲಾರಿಯನ್ನು ಬ್ರಿಡ್ಜ್ ಮೇಲೆ ನಿಲ್ಲಿಸಿ ತ್ಯಾಜ್ಯ ವಸ್ತುಗಳನ್ನು ರಸ್ತೆಯ ಬದಿಯಲ್ಲಿ ಬಿಸಾಡುತ್ತಿದ್ದರು. ಇದನ್ನು ಪರಿಸರವಾದಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದು, ಆಯುಕ್ತರು ವಿಡಿಯೋವನ್ನು ಮನಪಾ ಆರೋಗ್ಯ ನಿರೀಕ್ಷಕರಿಗೆ ಕಳುಹಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





