ರಾಕೇಶ ಅಸ್ಥಾನಾ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ನಕಲು ಮಾಡಿದ್ದಾಗಿದೆ: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ,ಸೆ.23: ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಐಪಿಎಸ್ ಅಧಿಕಾರಿ ರಾಕೇಶ ಅಸ್ಥಾನಾರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ‘ಕಾಪಿ-ಪೇಸ್ಟ್ ’ಅರ್ಜಿ ಎಂದು ಬಣ್ಣಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸದಂತೆ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.
ನಕಲು ಮಾಡಲಾದ ಅರ್ಜಿಯಲ್ಲಿನ ಹೇಳಿಕೆಗಳನ್ನು ವಿವರಿಸಲು ಅರ್ಜಿದಾರರ ಪರ ವಕೀಲರಿಗೆ ಸಾಧ್ಯವಾಗದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ನ್ಯಾಯಾಲಯವು,ಈ ಅರ್ಜಿಯು ಪೂರ್ಣ ವಿರಾಮ ಮತ್ತು ಅಲ್ಪವಿರಾಮಗಳು ಸೇರಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಇಂತಹುದೇ ಅರ್ಜಿಯ ಯಥಾಪ್ರತಿಯಾಗಿದೆ. ಅರ್ಜಿದಾರರು ಏನನ್ನಾದರೂ ಸಲ್ಲಿಸಲು ಬಯಸಿದರೆ ಅದನ್ನು ಸ್ವತಂತ್ರವಾಗಿ ಮಾಡಬೇಕು ಎಂದು ಹೇಳಿತು.
Next Story