ನ್ಯಾಯಾಲಯಕ್ಕೆ ಅಗೌರವ ಆರೋಪ: ಕಪಿಲ್ ಶರ್ಮ ಶೋ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್ಐಆರ್

photo: instagram.com/kapilsharma/
ಭೋಪಾಲ್: ಕೋರ್ಟ್ರೂಮ್ ದೃಶ್ಯವೊಂದರಲ್ಲಿ ನಟರು ಮದ್ಯ ಸೇವಿಸುವುದನ್ನು ತೋರಿಸಿದ ದಿ ಕಪಿಲ್ ಶರ್ಮ ಶೋ ತಯಾರಕರ ವಿರುದ್ಧ ಮಧ್ಯಪ್ರದೇಶದ ಶಿವಪುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ದೃಶ್ಯದ ಮೂಲಕ ನಟರು ಹಾಗೂ ಶೋ ತಯಾರಕರು ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ವಕೀಲರೊಬ್ಬರು ಈ ದೂರು ದಾಖಲಿಸಿದ್ದಾರೆನ್ನಲಾಗಿದ್ದು ನ್ಯಾಯಾಲಯದಲ್ಲಿ ಅಕ್ಟೋಬರ್ 1ರಿಂದ ವಿಚಾರಣೆ ನಡೆಯಲಿದೆ ಎಂಬ ಮಾಹಿತಿಯಿದೆ.
"ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮ ಶೋ ಕೀಳು ಅಭಿರುಚಿಯನ್ನು ತೋರಿಸುತ್ತಿದೆ. ಮಹಿಳೆಯರ ಬಗ್ಗೆ ಕೆಟ್ಟ ಕಮೆಂಟ್ ಮಾಡಲಾಗುತ್ತದೆ. ಒಂದು ಎಪಿಸೋಡ್ನಲ್ಲಿ ಸ್ಟೇಜ್ನಲ್ಲಿ ಕೋರ್ಟ್ ದೃಶ್ಯ ತೋರಿಸಿ ನಟರು ಸಾರ್ವಜನಿಕವಾಗಿ ಮದ್ಯ ಸೇವಿಸುವುದನ್ನು ತೋರಿಸಲಾಗಿದೆ. ಇದು ನ್ಯಾಯಾಂಗ ನಿಂದನೆ. ಈ ಕಾರಣಕ್ಕೆ ಸೆಕ್ಷನ್ 356/3 ಅನ್ವಯ ದೂರುದಾಖಲಾಗಿದೆ" ಎಂದು ದೂರುದಾರ ವಕೀಲ ಹೇಳಿದ್ದಾರೆ.
Next Story