ಬಟ್ಟೆ ಒಗೆದು, ಇಸ್ತ್ರಿ ಮಾಡುವಂತೆ ಆದೇಶ ನೀಡಿದ್ದ ನ್ಯಾಯಾಧೀಶರಿಗೆ ನ್ಯಾಯಾಂಗ ಕೆಲಸದಿಂದ ಪಾಟ್ನಾ ಹೈಕೋರ್ಟ್ ನಿರ್ಬಂಧ

ಪಾಟ್ನಾ: ಆರೋಪಿಯೊಬ್ಬನಿಗೆ ಬಟ್ಟೆ ಒಗೆದು, ಇಸ್ತ್ರಿ ಮಾಡುವ ಷರತ್ತಿನಲ್ಲಿ ಜಾಮೀನು ಆದೇಶ ನೀಡಿದ್ದ ಬಿಹಾರದ ಕೆಳ ನ್ಯಾಯಾಲಯದ ನ್ಯಾಯಾಧೀಶರೊಬ್ಬರನ್ನು ಆಡಳಿತಾತ್ಮಕ ಆದೇಶವನ್ನು ಅನುಸರಿಸಿ ಪಾಟ್ನಾ ಹೈಕೋರ್ಟ್ ನ್ಯಾಯಾಂಗ ಕೆಲಸದಿಂದ ನಿರ್ಬಂಧಿಸಿದೆ.
ಹೈಕೋರ್ಟ್ ಮೂಲಗಳ ಪ್ರಕಾರ, ಶುಕ್ರವಾರ ನೀಡಿದ ಆದೇಶದಲ್ಲಿ, ಮಧುಬನಿ ಜಿಲ್ಲೆಯ ಜಾನ್ ಜಾರಪುರ ಉಪ ವಿಭಾಗದಲ್ಲಿ ನಿಯೋಜಿಸಲಾದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಅವಿನಾಶ್ ಕುಮಾರ್ ಅವರಿಗೆ ನ್ಯಾಯಾಲಯವು ಮುಂದಿನ ಆದೇಶದವರೆಗೆ ನ್ಯಾಯಾಂಗ ಕೆಲಸವನ್ನು ಕೈಗೊಳ್ಳದಂತೆ ಸೂಚಿಸಿದೆ.
ಕಿರುಕುಳ ಆರೋಪಿಯೊಬ್ಬನಿಗೆ ಪಶ್ಚಾತ್ತಾಪಕ್ಕಾಗಿ ತನ್ನ ಹಳ್ಳಿಯ ಎಲ್ಲ ಮಹಿಳೆಯರ ಬಟ್ಟೆ ಒಗೆದು ಇಸ್ತ್ರಿ ಮಾಡಬೇಕೆಂಬ ಷರತ್ತಿನ ಮೇಲೆ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರು ಜಾಮೀನು ನೀಡಿದ ಕೆಲವೇ ದಿನಗಳ ನಂತರ ಈ ಆಡಳಿತಾತ್ಮಕ ಕ್ರಮವು ಬಂದಿದೆ.
Next Story