ಕಾಮೆಡ್-ಕೆ ಫಲಿತಾಂಶ: ಬೆಂಗಳೂರಿನ ವೀರೇಶ್ ಬಿ.ಪಾಟೀಲ್ ಗೆ ಮೊದಲ ಸ್ಥಾನ
ಮೊದಲ 10 ಸ್ಥಾನಗಳಲ್ಲಿ ಐವರು ಕನ್ನಡಿಗರು
ಬೆಂಗಳೂರು, ಸೆ. 26: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಇದೇ ಸೆ.14ರಂದು ನಡೆಸಲಾದ ಕಾಮೆಡ್-ಕೆ ಯುಜಿ ಪರೀಕ್ಷೆಯ ಫಲಿತಾಂಶ ರವಿವಾರ ಪ್ರಕಟವಾಗಿದೆ.
ಮೊದಲ 10 ಸ್ಥಾನಗಳ ಪೈಕಿ ಐವರು ಹಾಗೂ ಮೊದಲ 100 ಸ್ಥಾನಗಳ ಪೈಕಿ 44 ಜನ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳೇ ಆಗಿದ್ದಾರೆ. ಫಲಿತಾಂಶದಲ್ಲಿ ಬೆಂಗಳೂರಿನ ವೀರೇಶ್ ಬಿ.ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾನೆ ಎಂದು ಕಾಮೆಡ್-ಕೆ ತಿಳಿಸಿದೆ.
ದೇಶದಾದ್ಯಂತ 157 ನಗರಗಳ 224 ಕೇಂದ್ರಗಳಲ್ಲಿ 44,111 ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪರೀಕ್ಷೆ ಬರೆದಿದ್ದರು. ಇದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು 16,632 ಮತ್ತು ಹೊರ ರಾಜ್ಯಗಳಿಂದ 27,479 ವಿದ್ಯಾರ್ಥಿಗಳು. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 4,660 ವಿದ್ಯಾರ್ಥಿಗಳು ಶೇ.90 ರಿಂದ ಶೇ.100 ರಷ್ಟು ಅಂಕಗಳನ್ನು ಗಳಿಸಿದ್ದರೆ, 4,343 ವಿದ್ಯಾರ್ಥಿಗಳು ಶೇ.80 ರಿಂದ ಶೇ.90ರಷ್ಟು ಅಂಕ ಗಳಿಸಿದ್ದಾರೆ. ಈಗ ಫಲಿತಾಂಶದ ವಿವರಗಳನ್ನು ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
Next Story