ಲೆಕ್ಕ ಸಹಾಯಕಗೆ ಗ್ರಾಮಸಭೆಯಲ್ಲಿ ಅವಮಾನ ಆರೋಪ : ದೂರು
ಕಾಪು, ಸೆ.26: ಉದ್ಯಾವರ ಗ್ರಾಪಂನ ಗ್ರಾಮ ಸಭೆಯಲ್ಲಿ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ಶಿವರಾಜು ಎಂ. ಎಂಬವರಿಗೆ ಪರಿಶಿಷ್ಟ ಜಾತಿಯ ನೌಕರ ಎಂಬ ಕಾರಣಕ್ಕೆ ಅವಮಾನ ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವರಾಜು ವಿರುದ್ಧ ಆರೋಪಿಗಳಾದ ಶೇಖರ ಕೋಟ್ಯಾನ್ ಹಾಗೂ ಭಾಸ್ಕರ್ ಕೋಟ್ಯಾನ್ ಲೋಕಾಯುಕ್ತ ನ್ಯಾಯಾಲಯ ಪ್ರಕರಣ ದಾಖಲಿಸಿ, ಮೇಲಾಧಿ ಕಾರಿಗಳಿಗೆ ದೂರು ನೀಡಿದ್ದರು. ಸೆ.23ರಂದು ನಡೆದ ಗ್ರಾಮಸಭೆಯಲ್ಲಿ ಆರೋಪಿಗಳು ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿ, ಶಿವರಾಜು ವಿರುದ್ಧ ಅಸಭ್ಯವಾಗಿ ಮಾತನಾಡಿ ಅವಮಾನ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





