ಕೆಮ್ಮಣ್ಣು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಲ್ಪೆ, ಸೆ.26: ಕೆಮ್ಮಣ್ಣು ಪ್ರಥಮ್ ಕ್ಲಿನಿಕ್, ತೊನ್ಸೆ ಗ್ರಾಪಂ ಮತ್ತು ಕೆಮ್ಮಣ್ಣು ಮಹಾಬಲ ಕ್ಲಿನಿಕಲ್ ಲ್ಯಾಬೊರೆಟರಿಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ಕೆಮ್ಮಣ್ಣಿನ ಕಾರ್ಮೆಲ್ ಶಾಲೆಯಲ್ಲಿ ನಡೆಯಿತು.
ಆಯುರ್ವೇದ ತಜ್ಞ ವೈದ್ಯ ಡಾ.ವಿಜಯ್ ಬಿ.ನೆಗಳೂರು ತಂಡದ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಮಧುಮೇಹ(ಡಯಾಬಿಟಿಕ್), ಆಮ್ಲ ಪಿತ್ತ(ಆ್ಯಸಿಡಿಟಿ) ಬಗ್ಗೆ ವಿಶೇಷ ಒತ್ತು ನೀಡಲಾಗಿತ್ತು. ಕೆಮ್ಮಣ್ಣು ಮಹಾಬಲ ಲ್ಯಾಬೋರೇಟರಿ ಕ್ಲಿನಿಕ್ನ ಮುಖ್ಯಸ್ಥರು ಮತ್ತು ಸಿಬ್ಬಂದಿ ರಕ್ತ ಪರೀಕ್ಷೆ ನಡೆಸುವ ಮೂಲಕ ಶಿಬಿರದ ಯಶಸ್ಸಿಗೆ ನೆರವಾದರು.
ಸಂದರ್ಭದಲ್ಲಿ ಜಯಂಟ್ಸ್ ಉಡುಪಿ ಸಂಸ್ಥೆ ಮತ್ತು ಇತರ ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಿಗಳಾದ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಧುಸೂಧನ್ ಹೇರೂರು, ಪ್ರಸನ್ನ ಭಟ್, ರಾಘವೇಂದ್ರ ಪ್ರಭು ಕರ್ವಾಲು, ಆಯುರ್ವೇದ ವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿ ವೈದ್ಯರುಗಳು, ವೈದ್ಯಕೀಯ ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಆಯುರ್ವೇದ ಔಷಧಿ ಕಂಪೆನಿಗಳ ವಿತರಕ ಪ್ರತಿನಿಧಿಗಳು, ಗ್ರಾಪಂ ಸದಸ್ಯರಾದ ಅರುಣ್ ಫೆರ್ನಾಂಡೀಸ್, ವತ್ಸಲಾ ವಿನೋದ್, ಯಶೋದ, ಆಶಾ, ಸಂಧ್ಯಾ, ಪ್ರತಿಭಾ, ಡಾ.ಫಹೀಮ್ ಅಬ್ದುಲ್ಲಾ, ಧಿರೇಂದ್ರಾ, ಪಂಚಾಯತ್ ಸಿಬ್ಬಂದಿ ಸಂತೋಷ್ ಮತ್ತು ಪ್ರಕಾಶ್, ಕಾರ್ಯದರ್ಶಿ ದಿನಕರ ಮೊದಲಾದವರು ಉಪಸ್ಥಿತರಿದ್ದರು.







