ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ
ಕಾರ್ಕಳ, ಸೆ.26: ಮೂರು ವರ್ಷಗಳ ಹಿಂದೆ ಮೃತಪಟ್ಟ ಪತ್ನಿಯ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಿಟ್ಟೆ ಗ್ರಾಮ ತೊಡಲೆ ನಿವಾಸಿ ಶಿವಪ್ಪ ಆಚಾರ್ಯ(79) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.25ರಂದು ಬೆಳಗ್ಗೆ ಮನೆಯ ಪಕ್ಕಾಸಿಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಸರಿಯಾಗಿ ಕೆಲಸ ಇಲ್ಲದೆ ಆರ್ಥಿಕವಾಗಿ ಸಂಕಷ್ಟಗೊಳಗಾಗಿದ್ದ ಸಂದೀಪ್ ಎಂಬವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.25ರಂದು ರಾತ್ರಿ ತನ್ನ ಹೆಂಡತಿ ಮನೆಯಾದ ವಡೇರಹೋಬಳಿ ಗ್ರಾಮದ ಸಲಿಂ ಅಲಿ ರಸ್ತೆಯ ಸಮೀಪ ಇರುವ ಮನೆಯ ತಾರಸಿಯ ಕಬ್ಬಿಣದ ಹುಕ್ಸ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಾಡ ಗ್ರಾಮದ ಜನತಾ ಕಾಲೋನಿಯ ಜೋನ್ಡಿ ಮೆಲ್ಲೋ(70) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಸೆ.26ರಂದು ಮಧ್ಯಾಹ್ನ ಜನತಾ ಕಲೊನಿಯ ಅಂಗನವಾಡಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





