ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ 'ವಿಶ್ವ ಔಷಧ ತಜ್ಞರ ದಿನ'

ಮಂಗಳೂರು : ನಗರದ ನಡುಪದವಿನಲ್ಲಿರುವ ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ "ಔಷಧ ತಜ್ಞರು ನಿಮ್ಮ ಆರೋಗ್ಯದ ಬಗ್ಗೆ ವಿಶ್ವಾಸಾರ್ಹರು" ಎಂಬ ವಿಷಯದಲ್ಲಿ ‘ವಿಶ್ವ ಔಷಧ ತಜ್ಞರ ದಿನ’ವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿಟ್ಟೆ ಫಾರ್ಮಸಿ ಕಾಲೇಜಿನ ಪ್ರೊ. ಡಾ. ಎಮ್.ಕೆ. ಉಣ್ಣಿಕೃಷ್ಣನ್ ಮಾತನಾಡಿ "ಔಷಧ ತಜ್ಞರು ಆರೋಗ್ಯ ರಂಗದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಅವಿರತ ಶ್ರಮ ವಹಿಸುತ್ತಿದ್ದಾರೆ. ರೋಗಿಗಳು ಪೂರ್ಣ ವಿಶ್ವಾಸ, ಭರವಸೆ ಹಾಗೂ ಆಶಾವಾದದೊಂದಿಗೆ ಔಷಧಿಗಳನ್ನು ಸೇವಿಸಿದರೆ ಅದು ಹೆಚ್ಚಿನ ಪರಿಣಾಮವನ್ನು ಬೀರಲು ಸಾಧ್ಯ" ಎಂದರು.
ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ಡಾ. ಶರ್ಮಿಳಾ ಕುಮಾರಿ, ಪಿ.ಎ. ಕಾಲೇಜಿನ ಎಂ.ಬಿ.ಎ. ನಿರ್ಧೇಶಕ ಡಾ. ಸಯ್ಯದ್ ಅಮೀನ್ ಉಪಸ್ತಿತರಿದ್ದರು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರತೀಕಾ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಪ್ರಣೀತ ಧನ್ಯವಾದವಿತ್ತರು. ಡಾ. ಮುಹಮ್ಮದ್ ಮುಬೀನ್ ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿಜೇತಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.










.jpeg)
.jpeg)

