ಟೆಸ್ಟ್ ಕ್ರಿಕೆಟ್ ನಿಂದ ಮೊಯಿನ್ ಅಲಿ ನಿವೃತ್ತಿ

ಲಂಡನ್: ಇಂಗ್ಲೆಂಡ್‌ನ ಅನುಭವಿ ಆಲ್‌ರೌಂಡರ್ ಮೊಯಿನ್ ಅಲಿ ಸೀಮಿತ ಓವರ್ ಕ್ರಿಕೆಟ್ ನಲ್ಲಿ ತಮ್ಮ ವೃತ್ತಿಜೀವನವನ್ನು ವಿಸ್ತರಿಸಲು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಮೊಯಿನ್ ಈಗಾಗಲೇ ತನ್ನ ನಿರ್ಧಾರವನ್ನು ನಾಯಕ ಜೋ ರೂಟ್ ಮತ್ತು ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್‌ಗೆ ತಿಳಿಸಿದ್ದಾರೆ.
34 ವರ್ಷದ ಅಲಿ ಅವರು 64 ಟೆಸ್ಟ್‌ಗಳಲ್ಲಿ 28.29 ಸರಾಸರಿಯಲ್ಲಿ 5 ಶತಕಗಳೊಂದಿಗೆ 2,914 ರನ್ ಗಳಿಸಿದ್ದಾರೆ . 36.66 ಸರಾಸರಿಯಲ್ಲಿ ಆಫ್ ಸ್ಪಿನ್ ಬೌಲಿಂಗ್ ಮೂಲಕ 195 ವಿಕೆಟ್ ಪಡೆದಿದ್ದಾರೆ.
2019 ರ ಆ್ಯಶಸ್ ಸರಣಿ ನಂತರ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡದ ಮೊಯಿನ್ ಅವರನ್ನು ಇತ್ತೀಚೆಗೆ ಭಾರತದ ವಿರುದ್ಧ ನಡೆದ ತವರಿನ ಸರಣಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
Next Story