ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್‌ನ ಮಹಾಸಭೆ
ಸುರತ್ಕಲ್, ಸೆ.27:ಅನ್ಸಾರಿಯ ಜುಮ್ಮಾ ಮಸ್ಜಿದ್ 9ನೇ ಬ್ಲಾಕ್ ಇದರ ಅಂಗ ಸಂಸ್ಥೆಯಾದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಅಶ್ರಫ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಅನ್ಸಾರ್ ವರದಿ ವಾಚಿಸಿದರು. ಲೆಕ್ಕ ಪರಿಶೋಧಕ ಮುಹಮ್ಮದ್ ನಝರುದ್ದೀನ್ ಲೆಕ್ಕಪತ್ರ ಮಂಡಿಸಿದರು. ಅಸೋಸಿಯೇಶನ್‌ನ ಅಧ್ಯಕ್ಷ ರಿಝ್ವನ್, ಉಪಾಧ್ಯಕ್ಷರಾಗಿ ರಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಕೀರ್ ಮತ್ತು ತೌಸೀಫ್, ಕೋಶಾಧಿಕಾರಿ ರಶೀದ್ ಹಾಗೂ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Next Story





