ಕಟ್ಟಡ ಕಾರ್ಮಿಕರಿಗೆ ಸುರಕ್ಷ, ಪ್ರತಿರಕ್ಷಣಾ ಕಿಟ್ ವಿತರಣೆ

ಬೈಂದೂರು, ಸೆ.27: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಕೊಯಾ ನಗರ ಘಟಕದ ಸದಸ್ಯರ ಸಭೆಯು ಸ್ಥಳೀಯ ಮೆಸ್ಕಾಂ ಕಚೇರಿ ಬಳಿ ಸೆ.26ರಂದು ಜರಗಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆಯ ಸುರಕ್ಷಾ ಕಿಟ್ ಮತ್ತು ಪ್ರತಿರಕ್ಷಣಾ ಕಿಟ್ ಗಳನ್ನು ಕಾರ್ಮಿಕ ಸಂಘದ ರಾಜ್ಯ ಸಮಿತಿ ಸದಸ್ಯ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಕಾರ್ಮಿಕರಿಗೆ ವಿತರಿಸಿದರು.
ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಇತ್ತೀಚೆಗೆ ಜರಗಿದ ಕಾರ್ಮಿಕ ಅದಾಲತ್ ಸಭೆಯಲ್ಲಿ ಸಲ್ಲಿಸಿದ ಕಾರ್ಮಿಕರ ವಿವಿಧ ಸೌಲಭ್ಯಗಳ ಬಾಕಿ ನಿಂತಿರುವ ಅರ್ಜಿಗಳಿಗೆ ಈ ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಚಿಕ್ಕಯ್ಯ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಜಯ ಬಿ.ಕಿರಿಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.
Next Story





