ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಮಲ್ಪೆ, ಸೆ.27: ಕೊಡವೂರು ಬ್ರಾಹ್ಮಣ ಮಹಾಸಭಾದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನೆ ಹಾಗು ಪ್ರತಿಭಾಭಿವಂದನೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸುಬ್ರಹ್ಮಣ್ಯ ನಾವಡ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಉಡುಪಿ ನಗರಸಭಾ ಸದಸ್ಯ ಹಾಗು ಉಡುಪಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಮಾತ ನಾಡಿದರು.
ಗುರುವಂದನೆಯ ಅಂಗವಾಗಿ ಉಡುಪಿ ಬೋರ್ಡ್ ಹೈಸ್ಕೂಲ್ ಮುಖ್ಯೋ ಪಾಧ್ಯಾಯ ಸುರೇಶ್ ಭಟ್ ಹಾಗು ಅವರ ಸಹಧರ್ಮಿಣಿ ಶಿಕ್ಷಕಿ ಸುಮನಾ ಭಟ್ ಮತ್ತು ಉಡುಪಿ ಸೈಂಟ್ ಸಿಸಿಲಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಉಮೇಶ್ ರಾವ್ ಇವರನ್ನು ಅಭಿನಂದಿಸಲಾ ಯಿತು. ಅಲ್ಲದೆ ಶಿಷ್ಯ ವೇತನವನ್ನು ಅರ್ಹ ಪ್ರತಿಭಾವ ಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಎಸೆಸೆಲ್ಸಿಯಲ್ಲಿ 625 ಪೂರ್ಣ ಅಂಕ ಪಡೆದ ಕೊಡವೂರಿನ ಸಾತ್ವಿಕ್ ಭಟ್ ಹಾಗು ಅಭಿಷೇಕ್ ಜಯಂತ್ ಹೊಳ್ಳ ಇವರನ್ನು ಸನ್ಮಾನಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೆೀತರಿಗೆ ಬಹುಮಾನ ವಿತರಿಸಲಾಯಿತು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್ ಸ್ವಾಗತಿಸಿದರು. ರಜತ ಮಹೋತ್ಸವ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಉಪಸ್ಥಿತರಿ ದ್ದರು. ಭಾರತಿ ಸುಬ್ರಹ್ಮಣ್ಯ ವಂದಿಸಿದರು. ದೀಪಾ ರಾಮಕೃಷ್ಣ ರಾವ್ ಕಾರ್ಯ ಕ್ರಮ ನಿರೂಪಿಸಿದರು.







