ಯುವಕ ನಾಪತ್ತೆ

ಉಡುಪಿ, ಸೆ.27: ಕೇರಳ ರಾಜ್ಯದ ಕಾಸರಗೂಡಿನ ನಿವಾಸಿ ನಾರಾಯಣ (32) ಇವರು ಸೆ.5ರಂದು ಬೆಳಗಿನ ಅವಧಿಯಲ್ಲಿ ಜಿಲ್ಲೆಯ ನಾಡ್ಪಾಲು ಗ್ರಾಮದ ಅರಸಿನಮನೆ ಎಂಬಲ್ಲಿರುವ ಎನ್.ಕೆ ನಂಬಿಯಾರ್ ಮಾಲಕತ್ವದ ತೋಟದಿಂದ ಕಾಣೆಯಾಗಿದ್ದಾರೆ.
5 ಅಡಿ ಎತ್ತರ, ತೆಳ್ಳಗಿನ ಶರೀರ, ಎಣ್ಣೆಗಪ್ಪು ಮೈಬಣ್ಣ, ಬಿಳಿ ಶರ್ಟ್ ಮತ್ತು ಕಂದು ಬಣ್ಣದ ಲುಂಗಿ ಧರಿಸಿದ್ದು, ಕನ್ನಡ ಮತ್ತು ಮಲಯಾಳಂ ಮಾತನಾಡುತ್ತಾರೆ. ಈ ವ್ಯಕ್ತಿಯ ಚಹರೆ ಗುರುತು ಸಿಕ್ಕಲ್ಲಿ ಸಾರ್ವಜನಿಕರು ಹೆಬ್ರಿ ಪೊಲೀಸ್ ಠಾಣೆ ದೂ.ಸಂ: 08253-251116 ಪಿ.ಎಸ್.ಐ ದೂ.ಸಂ: 9480805463 ಮತ್ತು ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ ದೂ.ಸಂ: 08258-231083, 9480805435 ನ್ನು ಸಂಪರ್ಕಿಸುವಂತೆ ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story





