ಸೆ.29: ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ಕೌನ್ಸಿಲ್ ಸಭೆ
ಮಂಗಳೂರು, ಸೆ.27: ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಕೌನ್ಸಿಲ್ ಸಭೆಯು ಸೆ.29ರಂದು ನೇರಳಕಟ್ಟೆ ಕೊಡಾಜೆಯ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ.
ಜಿಲ್ಲಾಧ್ಶಕ್ಷ ಸೈಯದ್ ಅಮೀರ್ ತಂಙಳ್ ಅಧ್ಯಕ್ಷತೆ ವಹಿಸುವರು. ಎಸ್ಕೆಎಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಸಭೆ ಉದ್ಘಾಟಿಸಲಿದ್ದಾರೆ. ಕೇಂದ್ರ ಕಾರ್ಯದರ್ಶಿ ಖಾಸಿಂ ದಾರಿಮಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಬೂಸ್ವಾಲಿಹ್ ಪೈಝಿ ಉಪನ್ಯಾಸ ನೀಡಲಿದ್ದಾರೆ.
ಎಸ್ಕೆಎಸೆಸ್ಸೆಫ್ ಜಿಲ್ಲಾ ಸಮಿತಿಯ ನೂತನ ಸಾರಥಿಗಳಿಗೆ ಸನ್ಮಾನ ಹಾಗೂ ಅತೀ ಹೆಚ್ಚು ಸಹಚಾರಿ ರಿಲೀಫ್ ಸೆಲ್‌ಗೆ ಹಣ ಸಂಗ್ರಹಿಸಿದ ವಲಯ,ಶಾಖಾ ಸಮಿತಿಗೆ ಶೈಖುನಾ ಮಿತ್ತಬೈಲ್ ಉಸ್ತಾದ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.
Next Story





