ಕೋವಿಡ್ ಇನ್ನಷ್ಟು ಸಮಯ ಜಗತ್ತಿನಲ್ಲಿ ಉಳಿಯಬಹುದು: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ವೈರಸ್ ಇನ್ನಷ್ಟು ದೀರ್ಘ ಕಾಲ ಜಗತ್ತಿನಲ್ಲಿ ಹರಡುತ್ತಲೇ ಇರಬಹುದು ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆಯ ವಾಯುವ್ಯ ಏಷ್ಯಾ ಪ್ರಾಂತೀಯ ನಿರ್ದೇಶಕಿ ಪೂನಮ್ ಖೇತ್ರಪಾಲ್ ಸಿಂಗ್, "ಲಸಿಕೆ ನೀಡಿಕೆ ಹಾಗೂ ಈ ಹಿಂದಿನ ಸೋಂಕಿನಿಂದ ಜನಸಂಖ್ಯೆಯಲ್ಲಿ ಎಷ್ಟು ಈ ಕೋವಿಡ್ ನಿರೋಧಕ ಶಕ್ತಿ ಇರಬಹುದು ಎಂಬ ಆಧಾರದಲ್ಲಿ ಮುಂದೆ ಈ ಸೋಂಕು ಜಗತ್ತಿನಲ್ಲಿ ಉಳಿಯಲಿದೆಯೇ ಹಾಗೂ ಜನರು ಅದರ ಜತೆಗೇ ಬದುಕುವಂತಾಗಬಹುದೇ ಎಂಬುದು ನಿರ್ಧರಿತವಾಗುತ್ತದೆ" ಎಂದು ಹೇಳಿದರು.
ಲಸಿಕೆಯ ಬೂಸ್ಟರ್ ಡೋಸ್ಗಳ ಕುರಿತು ಮಾತನಾಡಿದ ಅವರು "ಪ್ರತಿ ದೇಶದ ಕನಿಷ್ಠ ಶೇ40 ರಷ್ಟು ಜನಸಂಖ್ಯೆಗೆ ಲಸಿಕೆ ದೊರೆಯುವಂತಾಗಲು ಬೂಸ್ಟರ್ ಡೋಸ್ಗಳಿಗೆ 2021ರ ಅಂತ್ಯದವರೆಗೆ ಅನುಮತಿಸದಿರಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ. ಎಲ್ಲರೂ ಸುರಕ್ಷಿತರಾಗುವ ತನಕ ಯಾರೂ ಸುರಕ್ಷಿತರಲ್ಲ" ಎಂದು ಅವರು ತಿಳಿಸಿದರು.
ತೀವ್ರ ರೋಗ ಹಾಗೂ ಸಾವಿನಿಂದ ರಕ್ಷಿಸುವಲ್ಲಿ ಕೋವಿಡ್ ಲಸಿಕೆಯ ಪರಿಣಾಮ ಸಮಯ ಕಳೆದಂತೆ ಕುಂಠಿತವಾಗುತ್ತದೆ ಎಂಬುದಕ್ಕೆ ಸದ್ಯ ಯಾವುದೇ ನಿರ್ಣಾಯಕ ಪುರಾವೆಯಿಲ್ಲ ಎಂದು ಅವರು ಹೇಳಿದರು.





