ಬೆಂಗಳೂರು: ಟಿಕೆಟ್ ರಹಿತ ಪ್ರಯಾಣಿಕರಿಂದ ರೂ. 3,57,200 ದಂಡ ವಸೂಲಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಟಿಕೇಟ್ ಪಡೆಯದೆ ಅನಧಿಕೃತವಾಗಿ ಸಂಚರಿಸುವ ಪ್ರಯಾಣಿಕರಿಂದ ತನಿಖಾ ತಂಡಗಳು ಒಟ್ಟು ರೂ.3,57,200 ಅನ್ನು ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಸಾರಿಗೆ ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ 2021ರ ಆಗಸ್ಟ್ ತಿಂಗಳಿನಲ್ಲಿ ನಗರಾದ್ಯಂತ ಸಂಚರಿಸುವ ವಾಹನಗಳ 16,545 ಟ್ರಿಪ್‍ಗಳನ್ನು ತಪಾಸಣೆ ನಡೆಸಿ, 2259 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದ್ದು, ಅವರಿಂದ 3,56,400 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಹಾಗೂ ಸಂಸ್ಥೆಯ ನಿರ್ವಾಹಕರ ಮೇಲೆ 1500 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುವ 8 ಪುರುಷ ಪ್ರಯಾಣಿಕರಿಂದ 800 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟಾರೆಯಾಗಿ 2267 ಪ್ರಯಾಣಿಕರಿಂದ ಒಟ್ಟು ರೂ.3,57,200 ಅನ್ನು ದಂಡ ವಸೂಲಿ ಮಾಡಲಾಗಿದೆ.
ಬೆಂಮಸಾ ಸಂಸ್ಥೆಯ ವಾಹನಗಳಲ್ಲಿ ಅಧಿಕೃತ ಟಿಕೆಟ್ ಅಥವಾ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು ಹಾಗೂ ಮಹಿಳೆಯರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡಬೇಕು ಎಂದು ಸಂಸ್ಥೆ ಪ್ರಯಾಣಿಕರಿಗೆ ಮನವಿ ಮಾಡಿದೆ.







