Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭೂಮಿಯ ಧ್ರುವಪ್ರದೇಶಗಳ ಆಕಾಶದಲ್ಲೀಗ...

ಭೂಮಿಯ ಧ್ರುವಪ್ರದೇಶಗಳ ಆಕಾಶದಲ್ಲೀಗ ಬಣ್ಣದೋಕುಳಿ

ವಾರ್ತಾಭಾರತಿವಾರ್ತಾಭಾರತಿ28 Sept 2021 7:35 PM IST
share
ಭೂಮಿಯ ಧ್ರುವಪ್ರದೇಶಗಳ ಆಕಾಶದಲ್ಲೀಗ ಬಣ್ಣದೋಕುಳಿ

ಉಡುಪಿ, ಸೆ.28: ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಈಗ ಆಕಾಶ ಅತಿ ಸುಂದರವಾಗಿ ಗೋಚರಿಸುತ್ತಿವೆ. ಅಲ್ಲೀಗ ಧ್ರುವ ಪ್ರಭೆಗಳ ತಾಂಡವ ನರ್ತನ. ಪ್ರವಾಸಿಗರ ಕಣ್ಮನಗಳಿಗಂತೂ ಸುಗ್ಗಿ. ಉತ್ತರ ಅಮೇರಿಕಾ, ಕೆನಡಾ, ಇಂಗ್ಲೇಡ್, ಯುರೋಪಿನ ಎಲ್ಲಾ ರಸಿಕರೂ ಈಗ ಗ್ರೀನ್‌ಲ್ಯಾಂಡ್, ನಾರ್ವೆ, ಸ್ವೀಡನ್ ದೇಶಗಳ ಕಡೆಗೆ ನುಗ್ಗುತ್ತಿದ್ದಾರೆ.

ಉತ್ತರ ಧ್ರುವ ಪ್ರದೇಶದ ಸಮೀಪದ ಆರ್ಕಟಿಕ್ ಸರ್ಕಲ್‌ನ ಪ್ರದೇಶಗಳ ಆಕಾಶದಲ್ಲಿ ಬಣ್ಣದೋಕುಳಿ. ಸುಮಾರು 15ರಿಂದ 20 ನಿಮಿಷಗಳ ಕಾಲ ಇಡೀ ಆಕಾಶದ ಸುತ್ತಲೂ ಬಣ್ಣಬಣ್ಣದ ಪ್ರಭೆ. ಹಸಿರು, ಕೆಂಪು, ನೀಲಿ, ಹಳದಿ ಹಾಗೂ ಸಂಮಿಶ್ರ ಬಣ್ಣಗಳ ಹೊಗೆಯೋ ಎನ್ನುವಂತಹ ಬೆಳಕಿನ ನರ್ತನ. ಇದಕ್ಕೆ ಧ್ರುವ ಪ್ರಭೆ ಅರೋರೆ ಎನ್ನುತ್ತಾರೆ. ದಕ್ಷಿಣ ಧ್ರುವ ಅಂಟಾರ್ಟೆಕಾದಲ್ಲೂ ಇದು ಕಾಣಿಸಿಕೊಳ್ಳುತ್ತವೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಖಗೋಳ ವಿಜ್ಞಾನಿ ಡಾ.ಎ.ಪಿ.ಭಟ್ ಹೇಳುತ್ತಾರೆ.

ಇದೇನು ಈಗ ವಿಶೇಷವೆನ್ನುತ್ತೀರಾ?, ಹೌದು. ಈಗ ಇದು ಅತ್ಯದ್ಭುತವಾಗಿ ಸೃಷ್ಟಿಯಾಗುತ್ತಿದೆ. ಇದು ಯಾವಾಗಲೂ ಕಾಣ ಸಿಗುವುದಿಲ್ಲ. ಕೆಲ ಕಾಲ ಇರುವುದೇ ಇಲ್ಲ. 11 ವರ್ಷಕ್ಕೊಮ್ಮೆ ಕೆಲ ಸಮಯ ಈ ಪ್ರಭೆ ಭಾರೀ ವಿಶೇಷ ವಾಗಿ ಕಂಡುಬರುತ್ತದೆ. ಈಗ ಕಾಣುವ ಪ್ರಭೆ ಇನ್ನೊಂದು ಆರು ತಿಂಗಳು ಇರುತ್ತದೆ. ಈ ಧ್ರುವ ಪ್ರಭೆಗಳಿಗೂ ನಮ್ಮ ಸೂರ್ಯನಿಗೂ ಬಾರೀ ನಂಟು. ಸೂರ್ಯನೋ , ಅದೇನೇನು ವಿಸ್ಮಯಗಳನ್ನು ಸೃಷ್ಟಿಸುವನೊ?

ಅಚ್ಚ ಹೊಸ ಬಿಸಿಬಿಸಿ ಸುದ್ದಿ. ಈ ತಿಂಗಳಲ್ಲೇ ನಮ್ಮ ಸೂರ್ಯ ಕೆಂಡಾಮಂಡಲ ವಾಗಿ ವಿಶೇಷ ಶಕ್ತಿಯನ್ನು ಉಗುಳುತ್ತಿದೆ. ಸಪ್ಟೆಂಬರ್ 26, 27ರಂದು ಉಗುಳಿದ ಜ್ವಾಲೆ, ಭೂಕಾಂತೀಯ ವಾತಾವರಣವನ್ನು ಹಾಗೂ ನಮ್ಮ ಆಧುನಿಕ ಸಂಪರ್ಕ ಗಳನ್ನು ಕೆಲ ನಿಮಿಷ ವ್ಯತ್ಯಾಸಗೊಳಿಸಲೂಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇವುಗಳಿಗೆ ‘ಸೋಲಾರ್ ಸ್ಟಾರ್ಮ್’ ಅಥವಾ ‘ಕೊರೋನಲ್ ಮಾಸ್ ಇಜೆಕ್ಷನ್’ (ಸಿಎಂಇ) ಎನ್ನುತ್ತಾರೆ. ಇದು ಸೂರ್ಯನಲ್ಲಿ ಯಾವಾಗಲೂ ನಡೆಯುವ ಪ್ರಕ್ರಿಯೆಯಾದರೂ ಈಗ ಬಹಳ ಹೆಚ್ಚಾಗುತ್ತಿದೆ. ಇದಕ್ಕೆ ಸೂರ್ಯನ ವಿಚಿತ್ರ ಅಯಸ್ಕಾಂತೀಯ ಚಲನೆಗಳು ಕಾರಣ. ಸುಮಾರು 11 ವರ್ಷಕ್ಕೊಮ್ಮೆ ಸೂರ್ಯನ ಧ್ರುವಗಳ ಅಯಸ್ಕಾಂತೀಯ ಪರಿವರ್ತನೆ ನಡೆಯುತ್ತದೆ. ಈ ಪ್ರಕ್ರಿಯೆ ನಡೆದ ನಂತರ ಸೂರ್ಯ ಜ್ವಾಲೆಗಳು ಹೆಚ್ಚು. ಈಗ 2021ರಲಿ್ಲ ಇದು ಸೂರ್ಯನಲ್ಲಿ ನಡೆಯುತ್ತಿದೆ.

2019ರಲ್ಲಿ ಸೂರ್ಯನ ಕಲೆಗಳು ಇಲ್ಲವೆಂಬಷ್ಟು ವಿರಳವಾಗಿತ್ತು. ಈ ವಿದ್ಯಮಾನವನ್ನು ನಿತ್ಯದ, ವರ್ಷದ ಸೂರ್ಯನ ಕಲೆಗಳಿಂದ ತಿಳಿಯ ಬಹುದು. ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಸೂರ್ಯನ ಮೈಯಲ್ಲಿ ಹೆಚ್ಚಿನ ಕಪ್ಪು ಕಲೆಗಳನ್ನು ನೋಡಬಹುದು. ಇವನ್ನು ಸೂರ್ಯನ ಕಲೆಗಳು ‘ಸನ್ ಸ್ಪಾಟ್ಸ್’ಎನ್ನುವರು.

ಸೂರ್ಯನ ಕಲೆಗಳು: ಸೂರ್ಯನಲ್ಲಿ 11 ವರ್ಷಕ್ಕೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪಾಟ್ ಸೈಕಲ್ ಎನ್ನುವರು. ಗೆಲಿಲಿಯೊ ದೂರದರ್ಶಕದಿಂದ 1610ರಲ್ಲಿ ಪ್ರಥಮವಾಗಿ ಇವುಗಳನ್ನು ಗುರುತಿಸಿದ ನಂತರ, ನಮ್ಮ ವಿಜ್ಞಾನಿಗಳು ಇವುಗಳನ್ನು ಅವಲೋಕಿಸುತ್ತಲೇ ಬಂದಿದ್ದಾರೆ.

ಸೂರ್ಯನಲ್ಲಿ 11 ವರ್ಷಕ್ಕೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪಾಟ್ ಸೈಕಲ್ ಎನ್ನುವರು. ಗೆಲಿಲಿಯೊ ದೂರದರ್ಶಕದಿಂದ 1610ರಲ್ಲಿ ಪ್ರಥಮವಾಗಿ ಇವುಗಳನ್ನು ಗುರುತಿಸಿದ ನಂತರ, ನಮ್ಮ ವಿಜ್ಞಾನಿಗಳು ಇವುಗಳನ್ನು ಅವಲೋಕಿಸುತ್ತಲೇ ಬಂದಿದ್ದಾರೆ. ಈ ಪ್ರಕ್ರಿಯೆಯನ್ನು ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ಈ ಸೂರ್ಯನ ಕಲೆಗಳು ಹೆಚ್ಚಿರುವ ಸಮಯದಲ್ಲೇ ಭೂಮಿಯ ಧ್ರುವ ಪ್ರದೇಶ ಗಳಲ್ಲಿ ಬಣ್ಣದೊಕುಳಿ ದ್ರುವ ಪ್ರಭೆ ಹೆಚ್ಚಿರುತ್ತವೆ. ಬಹಳ ಹಿಂದಿನಿಂದಲೂ ಇದನ್ನು ಗುರುತಿಸಲಾಗಿದೆ.

ಹೀಗಾಗಿ ಸೂರ್ಯನ ಕಾಂತೀಯ ವ್ಯತ್ಯಾಸ ಹಾಗೂ ವಿಶೇಷ ಶಕ್ತಿ ಉತ್ಸರ್ಜನದ ಕಾಲದಲ್ಲೇ ಸೂರ್ಯನ ಕಲೆಗಳು ಹಾಗೂ ದ್ರುವ ಪ್ರಭೆ ಹೆಚ್ಚು. ಇದರಿಂದ ಒಂದು ಪ್ರಶ್ನೆ ಮೂಡುವುದು ಸಹಜ. ಈ ಕಾಲದಲ್ಲಿ ದ್ರುವ ಪ್ರದೇಶದಲ್ಲಿ ಮಾತ್ರ ವಿಶೇಷ ಪ್ರಭೆ ಏಕೆ ಎಂಬುದು.

ಇದಕ್ಕೆ ಕಾರಣ ನಮ್ಮ ಭೂಮಿಯ ಸುತ್ತ ಇರುವ ಭೂಕಾಂತೀಯ ವಲಯಗಳು. ಇವು ಸೂರ್ಯನಿಂದ ಬರುವ ವಿಶೇಷ ಶಕ್ತಿಯ ಕಣಗಳನ್ನು ನಮ್ಮ ಸಮಭಾಜಕ ವೃತ್ತದ ಆಸುಪಾಸು ಸಂಪೂರ್ಣ ತಡೆಯಬಲ್ಲವು. ಆದರೆ ದ್ರುವಗಳಲ್ಲಿ ಅವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಆ ಶಕ್ತಿಯುತ ಕಣಗಳು ವಾತಾವರಣದ ಒಳ ನುಗ್ಗಿ ಅಲ್ಲಿರುವ ಅಣು, ಪರಮಾಣುಗಳೊಂದಿಗೆ ಘರ್ಷಿಸಿ ಬಣ್ಣ ಬಣ್ಣದ ಬೆಳಕನ್ನು ಬಿಡುಗಡೆ ಮಾಡುತ್ತವೆ. ಅದೇ ಧ್ರುವ ಪ್ರಭೆ ಎಂದು ಡಾ.ಎ.ಪಿ.ಭಟ್ ಅಲ್ಲಿನ ವಿದ್ಯಮಾನಗಳ ಕುರಿತು ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X