ಮಂಗಳೂರು; ಪೆಟ್ರೋಲ್ ಬಂಕ್ ಮ್ಯಾನೇಜರ್‌ಗೆ ಹಲ್ಲೆ: ದೂರು
ಮಂಗಳೂರು, ಸೆ.28: ಬ್ಯಾಂಕಿಗೆ ಹಣವನ್ನು ಕಟ್ಟಲು ಬೈಕಿನಲ್ಲಿ ತೆರಳುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್‌ಗೆ ಹಲ್ಲೆ ನಡೆಸಿ, 4.20 ಲಕ್ಷ ರೂ. ಸುಲಿಗೆಗೈದ ಘಟನೆ ನಗರದ ಚಿಲಿಂಬಿಯಲ್ಲಿ ಮಂಗಳವಾರ ನಡೆದಿದೆ.
ನಗರದ ಗಾಂಧಿನಗರ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ (57) ಎಂಬವರು ಮಧ್ಯಾಹ್ನ 12:30ರ ವೇಳೆ ಉರ್ವ ಚಿಲಿಂಬಿಯಲ್ಲಿರುವ ಬ್ಯಾಂಕ್‌ನ ಖಾತೆಗೆ ಹಾಕಲು 4.20ಲಕ್ಷ ರೂ.ನ್ನು ಬ್ಯಾಗಿನಲ್ಲಿಟ್ಟು ತೆರಳುತ್ತಿದ್ದರು. ಈ ವೇಳೆ ಚಿಲಿಂಬಿಯಲ್ಲಿ ಬೈಕ್ ಯು-ಟರ್ನ್ ಮಾಡಿ ಬ್ಯಾಂಕ್ ನತ್ತ ತೆರಳುತ್ತಿದ್ದಾಗ ಇಬ್ಬರು ಬೈಕ್‌ನ್ನು ಬದಿಯಲ್ಲಿ ನಿಲ್ಲಿಸಿ ಭೋಜಪ್ಪ ಅವರನ್ನು ತಡೆು, ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದಾಗಿ ಭೋಜಪ್ಪರು ವಿಚಲಿತರಾಗಿದ್ದಾರೆ. ಈ ವೇಳೆ ಆರೋಪಿಗಳು ಹಣದ ಬ್ಯಾಗ್ ಸುಲಿಗೆ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪರ ತಲೆ, ಭುಜಕ್ಕೆ ಗಾಯವಾಗಿದೆ. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





