ಹಿರಿಯಡ್ಕ: ಬಾಲಕ ನೇಣು ಬಿಗಿದು ಆತ್ಮಹತ್ಯೆ
ಹಿರಿಯಡ್ಕ, ಸೆ.28: 16 ವರ್ಷ ಪ್ರಾಯದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಕಣಜಾರು ಗ್ರಾಮದಿಂದ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕಣಜಾರು ಗ್ರಾಮದ ಕಡೆಬೆರ್ಕೆಯ ಸುರೇಂದ್ರ ಎಂಬವರ 16 ವರ್ಷ ಪ್ರಾಯದ ಪುತ್ರ ಸೂರಜ್ ಎಂದು ಗುರುತಿಸಲಾಗಿದೆ. ಹಿಂದಿನಿಂದಲೂ ಕುಡಿತದ ಚಟವನ್ನು ಹೊಂದಿದ್ದ ಈತ, ಮನೆಯವರೊಂದಿಗೆ ಹೆಚ್ಚಾಗಿ ಬೆರೆಯದೇ ಏಕಾಂಗಿಯಾಗಿ ಇರುತಿದ್ದ ಎನ್ನಲಾಗಿದೆ.
ಇದೇ ಕಾರಣದಿಂದ ಸೋಮವಾರ ರಾತ್ರಿ 8ರಿಂದ 11:30ರ ನಡುವಿನ ಅವಧಿಯಲ್ಲಿ ಅಜಿತ್ ಶೆಟ್ಟಿ ಎಂಬವರಿಗೆ ಸೇರಿದ ಜಾಗದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





