"ಫೋಟೊಶಾಪ್ ಬಳಸಿ ತಿರುಚಲ್ಪಟ್ಟ ಚಿತ್ರಗಳು ಮತ್ತಷ್ಟು ಅನಿಶ್ಚಿತತೆ, ತಪ್ಪು ಮಾಹಿತಿಗಳನ್ನು ಹರಡುತ್ತದೆ"
'ಮೋದಿ ಭೂಮಿಯ ಕೊನೆ ಭರವಸೆʼ ಎಂಬ ನಕಲಿ ಚಿತ್ರದ ಕುರಿತು ನ್ಯೂಯಾರ್ಕ್ ಟೈಮ್ಸ್ ಸ್ಪಷ್ಟನೆ

Photo: twitter.com/NYTimesPR
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಬೃಹದಾಕಾರದ ಫೊಟೊದೊಂದಿಗೆ ಪ್ರತಿಷ್ಟಿತ ನ್ಯೂಯಾರ್ಕ್ ಟೈಮ್ಸ್ ಮುಖಪುಟ ವರದಿ ಪ್ರಕಟಿಸಿದೆ ಎಂಬ ಚಿತ್ರವೊಂದು ಕೆಲದಿನಗಳಿಂದ ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿತ್ತು. "ಭೂಮಿಯ ಕೊನೆಯ, ಉತ್ತಮ ಭರವಸೆʼ ಎಂಬ ಶೀರ್ಷಿಕೆಯನ್ನೂ ನೀಡಲಾಗಿತ್ತು. ಹಲವು ಮಾಧ್ಯಮಗಳು ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿ ಬಳಿಕ ಇದೊಂದು ತಿರುಚಲ್ಪಟ್ಟ ಚಿತ್ರ ಎಂದು ಕಂಡುಕೊಂಡಿದ್ದರು.
ಇದೀಗ ಸ್ವತಃ ನ್ಯೂಯಾರ್ಕ್ ಟೈಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಚಿತ್ರದ ಕುರಿತು ಸ್ಪಷ್ಟನೆ ನೀಡಿದೆ. ಪ್ರಧಾನಿ ಮೋದಿ ಸಂಬಂಧಿಸಿ ನಾವು ಪ್ರಕಟಿಸಿದ್ದೇವೆಂದು ಹರಿದಾಡುತ್ತಿರುವ ಹಲವಾರು ಚಿತ್ರಗಳ ಪೈಕಿ ಇದೂ ಸಂಪೂರ್ಣವಾಗಿ ತಿರುಚಲ್ಪಟ್ಟ ಚಿತ್ರವಾಗಿದೆ. ಸತ್ಯ ಮತ್ತು ನಂಬಿಕೆಯ ಪತ್ರಿಕೋದ್ಯಮದ ಅವಶ್ಯಕತೆ ಇರುವ ಈ ಸಂದರ್ಭದಲ್ಲಿ ಇಂತಹಾ ಫೋಟೊಶಾಪ್ ಬಳಸಿ ತಿರುಚಲ್ಪಟ್ಟ ಚಿತ್ರಗಳು ಮತ್ತಷ್ಟು ಅನಿಶ್ಚಿತತೆ, ತಪ್ಪು ಮಾಹಿತಿಗಳನ್ನು ಹರಡುತ್ತದೆ". ನರೇಂದ್ರ ಮೋದಿಗೆ ಸಂಬಂಧಿಸಿದ ನಮ್ಮ ವರದಿಗಳ ಲಿಂಕ್ ಇಲ್ಲಿದೆ" ಎಂದು ನ್ಯೂಯಾರ್ಕ್ ಟೈಮ್ಸ್ ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದೆ.
"ನೀವೆಷ್ಟೇ ಸ್ಪಷ್ಟನೆಗಳನ್ನು ನೀಡಿದರೂ ಈಗಾಗಲೇ ಈ ಚಿತ್ರ ವಾಟ್ಸಪ್ ಯುನಿವರ್ಸಿಟಿ ಮೂಲಕ ದೇಶದ ಮನೆಮನೆಗಳಿಗೆ ತಲುಪಿ ಅವರನ್ನು ನಂಬುವಂತೆ ಮಾಡಿದೆ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.
This is a completely fabricated image, one of many in circulation featuring Prime Minister Modi. All of our factual reporting on Narendra Modi can be found at:https://t.co/ShYn4qW4nT pic.twitter.com/gsY7AlNFna
— NYTimes Communications (@NYTimesPR) September 28, 2021







