ನವಜೋತ್ ಸಿಂಗ್ ಅವರನ್ನು ಸಂವಾದಕ್ಕೆ ಆಹ್ವಾನಿಸಿದ ಪಂಜಾಬ್ ಸಿಎಂ ಚರಣ್ ಜೀತ್ ಸಿಂಗ್
ಹೊಸದಿಲ್ಲಿ: ಹೊಸ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಚನ್ನಿ ಸೋಮವಾರ ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿದ ನವಜೋತ್ ಸಿಂಗ್ ಸಿಧು ಅವರನ್ನು ಸಂಪರ್ಕಿಸಿದ್ದಾರೆ. ಸಿಧು ಅವರ ಆಕ್ಷೇಪಣೆಗಳಿರುವ ವಿಷಯಗಳ ಬಗ್ಗೆ ಚರ್ಚಿಸಲು ಸೂಚಿಸಿದ್ದು ತಾನು ಹೊಂದಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
"ಪಕ್ಷದ ಅಧ್ಯಕ್ಷರು ಕುಟುಂಬದ ಮುಖ್ಯಸ್ಥರಾಗಿದ್ದಾರೆ. ಕುಟುಂಬದೊಳಗಿನ ವಿಷಯಗಳನ್ನು ಮುಖ್ಯಸ್ಥರು ಚರ್ಚಿಸಬೇಕು. ನಾನು ಇಂದು ಸಿಧು ಸಾಹಿಬ್ ಜೊತೆ ಮಾತನಾಡಿದ್ದೇನೆ. ಅವರನ್ನು ಸಂವಾದಕ್ಕೆ ಆಹ್ವಾನಿಸಿದ್ದೇನೆ. ಪಕ್ಷದ ಸಿದ್ಧಾಂತವು ಅತ್ಯುನ್ನತವಾಗಿದೆ ಹಾಗೂ ಸರಕಾರವು ಆ ಸಿದ್ಧಾಂತವನ್ನು ಅನುಸರಿಸುತ್ತದೆ ಎಂದು ನಾನು ಅವರಿಗೆ ಹೇಳಿದ್ದೇನೆ. ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ, ನಾವು ಅದನ್ನು ಮಾತನಾಡಬಹುದು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ಚನ್ನಿ ಹೇಳಿದರು.
"ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ. ಯಾವುದೇ ನೇಮಕಾತಿಯಲ್ಲಿ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ, ನಾನು ಆ ಬಗ್ಗೆ ಗಟ್ಟಿಯಾಗಿಲ್ಲ ... ನನಗೆ ಅಹಂ ಇಲ್ಲ ... ಪಕ್ಷ ಸರ್ವೋಚ್ಚ ಎಂದು ನಾನು ಅವರಿಗೆ ಹೇಳಿದ್ದೇನೆ. ಮಾತನಾಡೋಣ" ಎಂದು ಚನ್ನಿ ಸುದ್ದಿಗಾರರಿಗೆ ತಿಳಿಸಿದರು.
ಚನ್ನಿ ಅವರು ತಮ್ಮ ಕ್ಯಾಬಿನೆಟ್ ಅನ್ನು ಹೆಸರಿಸಿದ ನಂತರ ಪಕ್ಷದ ಜೊತೆ ಯಾವುದೇ ಸಮಾಲೋಚನೆ ಇಲ್ಲದೆ ಸಿಧು ರಾಜೀನಾಮೆ ನೀಡಿದರು. ಅವರು ಹಲವಾರು ನೇಮಕಾತಿಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.