ಎಸ್ಡಿಪಿಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬೆಳ್ತಂಗಡಿ : ಕೋವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಶಾಲೆಯು ಹಂತ ಹಂತವಾಗಿ ಪುನರಾರಂಭಗೊಂಡಿದ್ದು, ಶಾಲಾ ಆವರಣವು ಸಂಪೂರ್ಣ ಪೊದೆಗಳು, ಕಸ-ಕಡ್ಡಿಗಳಿಂದ ಮಲಿನವಾಗಿದ್ದನ್ನು ಮನಗಂಡ ಎಸ್ಡಿಪಿಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಪರಿಸರವನ್ನು ಇತ್ತೀಚೆಗೆ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿ.ಕೆ, ಸಮೀರ್ ಎಸ್ ಕೆ, ಎಸ್ಡಿಪಿಐ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಜಿ.ಕೆ, ಕಾರ್ಯದರ್ಶಿ ಕಲಂದರ್ ಬಿ ಎಚ್, ಉಪಾಧ್ಯಕ್ಷರಾದ ಅಶ್ರಫ್ ಎಸ್ ಕೆ, ಎಸ್ಡಿಪಿಐ ಸುನ್ನತ್ ಕೆರೆ ವಾರ್ಡ್ ಅಧ್ಯಕ್ಷ ಇಸಾಕ್ ಪಿ ಎಸ್ ಕೆ , ಕಾರ್ಯದರ್ಶಿ ಕಲಂದರ್ ಅಂಗಡಿ, ಕೋಶಾಧಿಕಾರಿ ಅಲ್ತಾಫ್ ಎಸ್ ಕೆ ಹಾಗೂ ಎಸ್ಡಿಪಿಐ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.
ಶಾಲಾಭಿವೃದ್ಧ ಸಮಿತಿ ಅಧ್ಯಕ್ಷ ಹಕೀಮ್ ಸುನ್ನತ್ ಕೆರೆ ಹಾಗು ಶಾಲಾ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕವೃಂದ ಮೆಚ್ಚುಗೆ ವ್ಯಕ್ತಪಡಿಸಿದರು.






.jpeg)
.jpeg)


.jpeg)


.jpeg)

.jpeg)
.jpeg)

.jpeg)


