ಗೋವಾದ ಮಾಜಿ ಸಿಎಂ ಲುಯಿಝಿನ್ಹೊ ಫಲೇರೊ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆ

photo: ANI
ಕೋಲ್ಕತ್ತಾ: ಕಾಂಗ್ರೆಸ್ ತೊರೆದ ಎರಡು ದಿನಗಳ ನಂತರ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೇರೊ ಬುಧವಾರ ತೃಣಮೂಲ ಕಾಂಗ್ರೆಸ್ ಸೇರಿದರು. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ಇತರ ಹಿರಿಯ ನಾಯಕರಾದ ಸೌಗತಾ ರೇ ಹಾಗೂ ಸುಬ್ರತಾ ಮುಖರ್ಜಿ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿಕೊಂಡರು.
" ನಾನು ಕಾಂಗ್ರೆಸ್ ಮನುಷ್ಯ ಎಂದು ಆರಂಭದಲ್ಲೇ ಹೇಳಬೇಕು. ನನಗೆ ಒಂದೇ ಸಿದ್ಧಾಂತ ಹಾಗೂ ತತ್ವಗಳಿವೆ. ಇಂದು ನಾನು ಟಿಎಂಸಿಗೆ ಸೇರುವಾಗ ನನ್ನ ಕನಸು ಈ ಕಾಂಗ್ರೆಸ್ ಕುಟುಂಬವನ್ನು ಒಟ್ಟುಗೂಡಿಸುವುದು. ನಾನು ಕಾಂಗ್ರೆಸ್ ಕುಟುಂಬ ಮತ್ತೊಮ್ಮೆ ಒಂದಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು. ನನ್ನ ಪ್ರಮುಖ ಗುರಿ ಬಿಜೆಪಿಯನ್ನು ಸೋಲಿಸುವುದು’’ಎಂದು ಫಲೇರೊ ಹೇಳಿದರು.
ಹಿಂದಿನ ದಿನ ಫಲೇರೊ ಹಾಗೂ ಗೋವಾದ ಇತರ ಕೆಲವು ಕಾಂಗ್ರೆಸ್ ನಾಯಕರು ಟಿಎಂಸಿ ವರಿಷ್ಠರು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾದರು.
Next Story