Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿ ಜನ್ಮದಿನದಂದು ಲಸಿಕೀಕರಣದ ನಕಲಿ...

ಮೋದಿ ಜನ್ಮದಿನದಂದು ಲಸಿಕೀಕರಣದ ನಕಲಿ ದಾಖಲೆ ಸೃಷ್ಟಿಸಲಾಗಿತ್ತೆಂದು ಸಾಕ್ಷಿ ಹೇಳುತ್ತಿರುವ ಸುಳ್ಳು ಪ್ರಮಾಣಪತ್ರಗಳು !

The Caravan Magazine ತನಿಖಾ ವರದಿ

ವಾರ್ತಾಭಾರತಿವಾರ್ತಾಭಾರತಿ29 Sept 2021 8:16 PM IST
share
ಮೋದಿ ಜನ್ಮದಿನದಂದು ಲಸಿಕೀಕರಣದ ನಕಲಿ ದಾಖಲೆ ಸೃಷ್ಟಿಸಲಾಗಿತ್ತೆಂದು ಸಾಕ್ಷಿ ಹೇಳುತ್ತಿರುವ ಸುಳ್ಳು ಪ್ರಮಾಣಪತ್ರಗಳು !

ಹೊಸದಿಲ್ಲಿ,ಸೆ.29: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ಭಾರತವು ‘ಮಹಾಭಿಯಾನ’ದ ಹೆಸರಿನಲ್ಲಿ ಒಂದೇ ದಿನದಲ್ಲಿ 2.5 ಕೋ.ಡೋಸ್ ಲಸಿಕೆಗಳನ್ನು ನೀಡುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ ಎಂದು ಕೇಂದ್ರವು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಇದಕ್ಕಾಗಿ ಹಿಂದಿನ ದಿನಗಳಲ್ಲಿ ಲಸಿಕೆ ನೀಡಿದ್ದ ಡಾಟಾವನ್ನು ಪಕ್ಕಕ್ಕಿರಿಸಿ ಸೆ.17ರಂದು ಎಲ್ಲವನ್ನೂ ಕೋವಿನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಲಸಿಕೀಕರಣದ ಸುಳ್ಳು ದಾಖಲೆಯನ್ನು ಸೃಷ್ಟಿಸಲಾಗಿತ್ತು ಎನ್ನುವುದನ್ನು Scroll ನಂತಹ ಸುದ್ದಿ ಜಾಲತಾಣಗಳು ಈಗಾಗಲೇ ಬಯಲಿಗೆಳೆದಿವೆ. ಇದೀಗ The Carvan ಮ್ಯಾಗಝಿನ್ ತನಿಖಾ ವರದಿಯನ್ನು ಪ್ರಕಟಿಸಿ ಈ ದಾಖಲೆ ನಕಲಿಯಾಗಿದೆ ಎನ್ನುವುದಕ್ಕೆ ಹಲವಾರು ಸುಳ್ಳು ಪ್ರಮಾಣಪತ್ರಗಳ ಸಾಕ್ಷವನ್ನು ಮುಂದಿಟ್ಟಿದೆ.

‘ನನ್ನ ತಾಯಿ ಸೆ.15ರಂದು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದರು,ಆದರೆ ಅದೇ ದಿನ ಅದನ್ನು ಕೋವಿನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಲಸಿಕೆ ಕೇಂದ್ರದ ಅಧಿಕಾರಿಗಳು ನಿರಾಕರಿಸಿದ್ದರು. ಮರುದಿನ ನನ್ನ ತಾಯಿ ಅವರನ್ನು ಸಂಪರ್ಕಿಸಿದಾಗ ‘ಮಹಾಭಿಯಾನ’ಕ್ಕಾಗಿ ನಿಮ್ಮ ಹೆಸರನ್ನು ಪಕ್ಕಕ್ಕಿರಿಸಲಾಗಿದೆ, ಆದ್ದರಿಂದ ಸೆ.17ರವರೆಗೆ ಕಾಯಿರಿ ಎಂದು ಅವರಿಗೆ ತಿಳಿಸಲಾಗಿತ್ತು ’ ಎಂದು ಮಧ್ಯಪ್ರದೇಶದ ಭೋಪಾಲ ನಿವಾಸಿ ಪ್ರಣಯ್ ನರ್ವಾರೆ The Carvanಗೆ ತಿಳಿಸಿದ್ದಾರೆ. 

ತಾಯಿಗೆ ಲಸಿಕೆ ಕೊಡಿಸಲು ಕರೆದೊಯ್ದಿದ್ದ ನರ್ವಾರೆ ಆಕೆ ನಿಜ ವಿಷಯವನ್ನು ತಿಳಿಸುವವರೆಗೆ ಲಸಿಕೆ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಾಗಿರಬಹುದು ಎಂದೇ ಭಾವಿಸಿದ್ದರು. ಕೊನೆಗೂ ಸೆ.17ರಂದು ನರ್ವಾರೆಯವರ ತಾಯಿಯ ಲಸಿಕೆ ಪ್ರಮಾಣಪತ್ರವನ್ನು ಕೋವಿನ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು,ಆದರೆ ಆಕೆ ಅಯೋಧ್ಯಾನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಲಸಿಕೆ ಪಡೆದಿದ್ದರೂ ಪ್ರಮಾಣಪತ್ರದಲ್ಲಿ ‘ಎಸ್ಡಿಎಂ ಗೋವಿಂದಪುರ’ಎಂದು ತೋರಿಸಲಾಗಿತ್ತು.

ದಾಖಲೆಯ ಲಸಿಕೀಕರಣವನ್ನು ಕೇಂದ್ರವು ಅಬ್ಬರದೊಂದಿಗೆ ಸಂಭ್ರಮಿಸಿದ್ದರೆ ಹಲವಾರು ನಾಗರಿಕರು ತಮ್ಮ ಲಸಿಕೆ ಪ್ರಮಾಣಪತ್ರದಲ್ಲಿ ಸುಳ್ಳು ಅಂಶಗಳು ತುಂಬಿರುವ ಬಗ್ಗೆ ದೂರಿಕೊಂಡಿದ್ದಾರೆ ಮತ್ತು ಇದು ಮೋದಿಯವರ ಜನ್ಮದಿನದಂದು ಲಸಿಕೆ ನೀಡಿಕೆಯ ಪ್ರಮಾಣವನ್ನು ಉತ್ಪ್ರೇಕ್ಷಿಸಲು ಪ್ರಯತ್ನಗಳು ನಡೆದಿದ್ದವು ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

The Carvan ವಿವಿಧ ರಾಜ್ಯಗಳ 13 ಜನರನ್ನು ಮಾತನಾಡಿಸಿದ್ದು,ಅವರೆಲ್ಲ ತಾವು ಲಸಿಕೆಯನ್ನು ಮೊದಲೇ ತೆಗೆದುಕೊಂಡಿದ್ದರೂ ಸೆ.17ರ ದಿನಾಂಕದ ಪ್ರಮಾಣಪತ್ರವನ್ನು ನೀಡಲಾಗಿದೆ ಅಥವಾ ತಾವು ವಾಸ್ತವದಲ್ಲಿ ಅಂದು ಎರಡನೇ ಡೋಸ್ ಪಡೆದಿರದಿದ್ದರೂ ತಮಗೆ ಲಸಿಕೆ ಪ್ರಮಾಣಪತ್ರವನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಹೆಚ್ಚಿನ ಪ್ರಮಾಣಪತ್ರಗಳಲ್ಲಿ ಅವರು ಮೊದಲ ಡೋಸ್ ಪಡೆದಿದ್ದ ಲಸಿಕೆ ಕೇಂದ್ರಕ್ಕಿಂತ ಭಿನ್ನವಾದ ಕೇಂದ್ರವನ್ನು ನಮೂದಿಸಲಾಗಿದೆ.

‘ಸೆ.17ರಂದು ತಾವು ಹೆಚ್ಚಿನ ಭಾರೀ ಪ್ರಮಾಣದಲ್ಲಿ ಲಸಿಕೀಕರಣವನ್ನು ದಾಖಲಿಸಿದ್ದು, ಅಂದು ಅಪ್ಲೋಡ್ ಮಾಡಲಾದ ಹೆಚ್ಚಿನ ಡಾಟಾ ಹಿಂದಿನ ಎರಡು ದಿನಗಳ ಲಸಿಕೀಕರಣದ್ದಾಗಿತ್ತು’ ಎಂದು ಬಿಹಾರದ ಹಲವಾರು ಅಧಿಕಾರಿಗಳು ತಿಳಿಸಿದ್ದನ್ನು (Scroll) ತನ್ನ ವರದಿಯಲ್ಲಿ ಉಲ್ಲೇಖಿಸಿದ ಬಳಿಕ ಹಲವಾರು ಪ್ರಶ್ನೆಗಳೆದ್ದಿವೆ. ಸೆ.17ರ ಮೊದಲು ಮತ್ತು ನಂತರ ದೇಶಾದ್ಯಂತದ ಲಸಿಕೀಕರಣ ಸಂಖ್ಯೆಗಳೂ ಮೋದಿ ಜನ್ಮದಿನದಂದು ಲಸಿಕೀಕರಣದ ಪ್ರಮಾಣವು ಉತ್ಪ್ರೇಕ್ಷಿತವಾಗಿತ್ತು ಎನ್ನುವುದನ್ನು ಸೂಚಿಸುತ್ತಿವೆ. 

ಸೆ.16ರಂದು ದೇಶಾದ್ಯಂತ ಸುಮಾರು 70 ಲ.ಡೋಸ್ ನೀಡಲಾಗಿದ್ದರೆ ಮರುದಿನವೇ ಅದು 2.5 ಕೋಟಿಗೆ ಜಿಗಿದಿತ್ತು. ಸೆ.18ರಂದು ಈ ಪ್ರಮಾಣ 85 ಲ.ಕ್ಕೆ ಮತ್ತು ಸೆ.19ರಂದು 77 ಲ.ಕ್ಕೆ ಕುಸಿದಿತ್ತು. ಸೆ.20,21 ಮತ್ತು 22ರಂದು ನೀಡಲಾಗಿದ್ದ ಡೋಸ್ಗಳ ಸಂಖ್ಯೆ ಅನುಕ್ರಮವಾಗಿ 85 ಲ.,68 ಲ. ಮತ್ತು 64 ಲ.ಆಗಿತ್ತು.
  
ಗುಜರಾತಿನ ವಡೋದರಾದಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಚರ್ ವಿದ್ಯಾರ್ಥಿಯಾಗಿರುವ ಹುಸೇನ್ ಬಾಜಿ ಸೆ.17ರಂದು ಎರಡನೇ ಡೋಸ್ ಲಸಿಕೆ ಪಡೆದಿರದಿದ್ದರೂ ಲಸಿಕೆ ಪ್ರಮಾಣಪತ್ರವನ್ನು ಸ್ವೀಕರಿಸಿರುವ ವ್ಯಕ್ತಿಗಳಲ್ಲಿ ಸೇರಿದ್ದಾರೆ. ಅವರ ಹುಟ್ಟೂರು ದಾಹೋಡ್ ನ ಲಸಿಕೆ ಕೇಂದ್ರದಿಂದ ಈ ಪ್ರಮಾಣಪತ್ರವನ್ನು ವಿತರಿಸಲಾಗಿದೆ. ತನಗೆ ಲಸಿಕೆ ಪ್ರಮಾಣಪತ್ರವನ್ನು ವಿತರಿಸಿರುವುದರಿಂದ ವಾಸ್ತವದಲ್ಲಿ ಎರಡನೇ ಡೋಸ್ ಪಡೆಯಲು ಸ್ಲಾಟ್ ಕಾಯ್ದಿರಿಸಲು ತನಗೆ ಸಾಧ್ಯವಾಗದಿರಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಹೀಗಾಗಿ ಮೊದಲ ಡೋಸ್ ಪಡೆದಿದ್ದ ಲಸಿಕೆ ಕೇಂದ್ರಕ್ಕೆ ತೆರಳಿ ವಿಚಾರಿಸಿದಾಗ ಎರಡನೇ ಡೋಸ್ ನೀಡಲು ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಲ್ಲಿಯ ಸಿಬ್ಬಂದಿಗಳು ಅವರಿಗೆ ತಿಳಿಸಿದ್ದಾರೆ.

‘ನನ್ನ ಪ್ರಮಾಣಪತ್ರವು ನನಗೆ ವಡೋದರಾದಲ್ಲಿ ಎರಡನೇ ಡೋಸ್ ನೀಡಲಾಗಿದೆ ಎಂದು ತೋರಿಸುತ್ತಿದೆ,ಆದರೆ ಪ್ರಮಾಣಪತ್ರದಲ್ಲಿ ದಾಹೋಡ್ನ ಲಸಿಕೆ ಕೇಂದ್ರವನ್ನು ನಮೂದಿಸಿರುವುದು ನಿಜಕ್ಕೂ ವಿಲಕ್ಷಣವಾಗಿದೆ ’ಎಂದು ಬಾಜಿ ತಿಳಿಸಿದರು. ತನ್ನ ಬಡಾವಣೆಯಲ್ಲಿ ಹಲವಾರು ಜನರು ಇಂತಹ ಗೊಂದಲಕ್ಕೊಳಗಾಗಿದ್ದಾರೆ. ಅವರ್ಯಾರೂ ಸೆ.17ರಂದು ಲಸಿಕೆಯನ್ನೇ ಪಡೆದಿರಲಿಲ್ಲ,ಆದರೂ ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು ಬಾಜಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ವೊಂದನ್ನು ಹಾಕಿದ್ದು,ತಮಗೂ ಗೊಂದಲವುಂಟಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಆಂಧ್ರಪ್ರದೇಶದ ತಿರುಪತಿಯ ಅರ್ಷದ್ ಅಲಿ, ಕರ್ನಾಟಕದ ಹಿರಿಯೂರಿನ ರಫಿಯಾ ಫಾತಿಮಾ, ಗುಜರಾತಿನ ಕೇಶೋಡ್ ನಿವಾಸಿ ತುಷಾರ್ ವೈಷ್ಣವ ಮತ್ತು ಅವರ ಪತ್ನಿ,‌ ವಡೋದರಾದ ಸೌರಭ್ ಮೌರ್ಯ,ಬಿಹಾರದ ಹಿಲ್ಸಾ ನಿವಾಸಿ ರಾಜು ಕುಮಾರ್ ಅವರದ್ದೂ ಇದೇ ಕಥೆ. ಇವರ್ಯಾರೂ ಸೆ.17ರಂದು ಲಸಿಕೆ ಪಡೆದಿರದಿದ್ದರೂ ಇವರ ಹೆಸರಿನಲ್ಲಿ ಪ್ರಮಾಣಪತ್ರಗಳು ವಿತರಣೆಯಾಗಿವೆ ಎಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X