ಹೈಕೋರ್ಟ್ ತೀರ್ಪಿಗೆ ಸೋದೆ, ಕಾಣಿಯೂರು ಶ್ರೀಗಳ ಸ್ವಾಗತ
ಉಡುಪಿ, ಸೆ.29: ದ್ವಂದ್ವ ಮಠಾಧೀಶರ ನೆಲೆಯಲ್ಲಿ ಶಿರೂರು ಮಠಕ್ಕೆ ಯೋಗ್ಯವಟುವಿಗೆ ಸನ್ಯಾಸ ದೀಕ್ಷೆ ನೀಡಿರುವುದನ್ನು ರಾಜ್ಯ ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿರುವುದು ನ್ಯಾಯಕ್ಕೆ ಸಂದ ಜಯ ಎಂದು ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಪ್ರತಿಕ್ರಿಯಿಸಿದ್ದಾರೆ.
ದ್ವಂದ್ವ ಮಠದ ನೆಲೆಯಲ್ಲಿ ಶಿರೂರು ಮಠದ ಆಡಳಿತವನ್ನು ಸುಮಾರು ಎರಡು ಮುಕ್ಕಾಲು ವರ್ಷ ವಹಿಸಿಕೊಂಡು ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲ ಮಠದಲ್ಲಿ ಶ್ರೀವೇದವರ್ಧನ ತೀರ್ಥರು ಎಂಬ ನಾಮಾಂಕಿತರಿಗೆ ಸನ್ಯಾಸ ದೀಕ್ಷೆ ನೀಡಿ ಶಿರೂರು ಮಠಾಧೀಶರಾಗಿ ನೇಮಿಸಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ನಮಗೆ ಅತೀವ ಸಂತೋಷವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





