ರೈತರಿಗೆ ನೀಡಿರುವ ಭರವಸೆ ಈಡೇರಿಸಲು ಸಿದ್ದ: ಸಚಿವ ಸುನೀಲ್ ಕುಮಾರ್

ಪಾವಗಡ.ಸೆ29:ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರ ವರ್ಗದವರು ಯಾವ ಯಾವ ಭರವಸೆಗಳನ್ನು ಈ ಭಾಗದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಾಂಸ್ಕøತಿಕ ಸಚಿವರು ಸುನಿಲ್ ಕುಮಾರ್ ತಿಳಿಸಿದ್ದಾರೆ.
ತಿರುಮಣಿ ಗ್ರಾಮದ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ(KSPDCL)ಆಯೋಜಿಸಿದ ಸಚಿವರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಅವತ್ತು ಯಾವ ಮಾತುಗಳು ಹೇಳಿ ನಿಮ್ಮ ಹತ್ತಿರ ಜಮೀನುಗಳನ್ನು ತೆಗೆದುಕೊಂಡಿದ್ದಾರೆ ಅವುಗಳನ್ನು ಹಂತಹಂತವಾಗಿ ಈಡೇರಿಸಲು ನಾವು ಈಗಲೂ ಬದ್ಧರಾಗಿದ್ದೇವೆ ಎಂದರು.
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಮಾತಿಗೆ ಹಿಂದೆ ಸರಿಯುವುದಿಲ್ಲ.ಅಧಿಕಾರಿಗಳು ಕೊಟ್ಟ ಅಂಕಿ-ಅಂಶಗಳ ಪ್ರಕಾರ ಸಾವಿರದ ಎರಡು ನೂರರಿಂದ ಸಾವಿರ ಐದುನೂರು ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಆದರೆ ಇದನ್ನು ಮತ್ತೊಂದು ಸಲ ಪರಿಶೀಲನೆ ಮಾಡಿಸುತ್ತೇನೆ.ಸೋಲಾರ್ ಪಾರ್ಕ್ ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಡಿಪ್ಲೊಮೋ ಐಟಿಐ ಕೋಸ್ರ್ಗಳ ಆಗಿರುವವರಿಗೆ ಮೊದಲ ಆದ್ಯತೆ ನೀಡುತ್ತೇವೆ.ಕೋಸ್ರ್ಗಳು ಮಾಡಿರುವವರು ನಮ್ಮ ಗಮನಕ್ಕೆ ತನ್ನಿ.ಇಲ್ಲಿನ ಸ್ಥಳೀಯ ಜನರಿಗೆ ಉದ್ಯೋಗ ನೀಡಲು ಇಲ್ಲಿನ ಶಾಲೆಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ಅವುಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದರು.
ಸೋಲಾರ್ ಪಾರ್ಕ್ ಸಿಎಸ್‍ಆರ್ ಫಂಡ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಿಯುವ ನೀರು ರಸ್ತೆಯಾಗಲಿ ಮುಂತಾದ ಕಾರ್ಯಗಳಿಗೆ ಸಿಎಸ್‍ಆರ್ ಫಂಡ್ನಲ್ಲಿ ಆದ್ಯತೆ ನೀಡಿದ್ದಾರೆ.ಅಧಿಕಾರಿವರ್ಗದವರು ಇದನ್ನು ಮೊದಲ ಆದ್ಯತೆ ಮೇರೆಗೆ ನೀಡುತ್ತೇವೆ.57 ಕೋಟಿ ರೂ ಕಾಮಗಾರಿಗಳು ಎಲ್ಲಿಯೂ ಸೋರಿಕೆಯಾಗದಂತೆ ಕಾಮಗಾರಿಗಳನ್ನು ಮಾಡುವ ಕಾರ್ಯ ಮಾಡುತ್ತೇವೆ.ಗ್ರಾಮದಿಂದ ಗ್ರಾಮಕ್ಕೆ ಸೋಲಾರ್ ಲೈಟ್ ನಿರ್ಮಾಣ ಅದನ್ನು ತಕ್ಷಣವೇ ಆದೇಶ ಮಾಡುತ್ತೇನೆ. ಕನ್ನಡ ನಾಮಫಲಕಗಳನ್ನು ಅಳವಡಿಸುವ ಕಾರ್ಯ ನಮ್ಮ ಮೆಟ್ರೋದಲ್ಲಿ ಮಾಡಬೇಕಂತ ಇದ್ದೇವೆ.ಅದು ಏನು ದೊಡ್ಡ ವಿಷಯ ಅಲ್ಲ ಕನ್ನಡ ನಾಮಫಲಕಗಳನ್ನು ಹಾಕಲು ನಮಗೆ ಅಭ್ಯಂತರವಿಲ್ಲ ಕನ್ನಡದ ನಾಮಪಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ತಕ್ಷಣ ಆದೇಶ ಮಾಡಿದರು.
ಕಾರ್ಯಕ್ರಮದಲ್ಲಿ ಹಾಲಿ ಶಾಸಕ ವೆಂಕಟರವಣಪ್ಪ.KSPDCLನ MD.ರುದ್ರಪ್ಪಯ್ಯ ಸಿಇಓ ಶ್ರೀನಿವಾಸ್.ತಾಲೂಕು ದಂಡಾಧಿಕಾರಿಗಳಾದ ಕೆ.ಆರ್.ನಾಗರಾಜ್.KSPDCLನ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.







