ಮಂಗಳೂರು ಪೊಲೀಸ್ ಟ್ರಾಫಿಕ್ ಅಭಿಯಾನ; ಹೆಲ್ಮೆಟ್ ಧರಿಸದ 728 ಸವಾರರ ವಿರುದ್ಧ ಕೇಸು ದಾಖಲು

ಫೈಲ್ ಫೋಟೊ
ಮಂಗಳೂರು, ಸೆ.29: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಟ್ರಾಫಿಕ್ ಅಭಿಯಾನ ಮೂರನೇ ದಿನವಾದ ಬುಧವಾರವೂ ಮುಂದುವರಿದಿದೆ. ಹೆಲ್ಮೆಟ್ ಧರಿಸದ 728 ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಂದ 3.64 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಮಂಗಳೂರು ಸಂಚಾರ ಉತ್ತರ ಠಾಣೆ ವ್ಯಾಪ್ತಿಯಲ್ಲಿನ 174 ಪ್ರಕರಣಗಳಲ್ಲಿ 87 ಸಾವಿರ ರೂ., ಸಂಚಾರ ಪಶ್ಚಿಮ ಠಾಣಾ ವ್ಯಾಪ್ತಿ 133 ಪ್ರಕರಣಗಳಲ್ಲಿ 66,500 ರೂ., ಸಂಚಾರ ಪೂರ್ವ ಠಾಣೆಯಲ್ಲಿ 209 ಪ್ರಕರಣಗಳ ಪೈಕಿ 1,04,500 ರೂ. ದಂಡ ವಿಧಿಸಲಾಗಿದೆ. ಇನ್ನು, ಸಂಚಾರ ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ 212 ಕೇಸುಗಳು ದಾಖಲಾಗಿ, 1,06,000 ರೂ. ದಂಡ ವಸೂಲಿಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





