ಸಾರಿಗೆ ನೌಕರರ ವೇತನ ಬಿಡುಗಡೆಗೊಳಿಸಿ ಸಿಎಂಗೆ ಮನವಿ
ಬೆಂಗಳೂರು, ಸೆ.29: ಕೆಎಸ್ರ್ಸಾಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನವನ್ನು ನೀಡುವಂತೆ ಕೆಎಸ್ಸಾರ್ಟಿಸಿ ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಪೇಡೆರೇಷನ್‍ನ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಕೋವಿಡ್-19 ಮಹಾಮಾರಿಯಿಂದ ಬಸ್ಸುಗಳಲ್ಲಿ ಕಡಿಮೆ ಸಂಖ್ಯೆ ಪ್ರಯಾಣಿಕರು ಪಯಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಡೀಸೆಲ್ ಬೆಲೆ ಏರಿಕೆಯಾಗಿದೆ. ಅದುದರಿಂದ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿ ಇರುವುದರಿಂದ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದರು.
ಆಗಸ್ಟ್ ಎಲ್ಲ ನೌಕರರಿಗೂ ಪೂರ್ಣ ವೇತನದಲ್ಲಿ ರಿಕವರಿಗಳನ್ನು ಕಳೆದು ಉಳಿದ ಹಣದಲ್ಲಿ ಅರ್ಧಭಾಗ ಕೊಡಲಾಗಿದ್ದು, ತಿಂಗಳ ಅರ್ಧ ವೇತನಕ್ಕಿಂತ ಕಡಿಮೆ ವೇತನ ಪಾವತಿಯಾಗಿದೆ. ಜೊತೆಗೆ ಸೆಪ್ಟೆಂಬರ್ ವೇತನ ಕೊಡಬೇಕಾಗಿದೆ. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ತಡೆ ಹಿಡಿಯಲಾದ ಆಗಸ್ಟ್‍ನ ಅರ್ಧ ತಿಂಗಳ ವೇತನ ಮತ್ತು ಸೆಪ್ಟೆಂಬರ್ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು. ಹಾಗೆಯೇ ಪ್ರತಿ ತಿಂಗಳೂ ವೇತನವನ್ನು ಸಕಾಲದಲ್ಲಿ ಕೊಡುವಂತೆ ಎಚ್.ವಿ.ಅನಂತಸುಬ್ಬರಾವ್ ಅವರು ಮನವಿ ಮಾಡಿದರು.







