ಬೈಕ್ ಕಳವು : ದೂರು ದಾಖಲು
ಮಂಗಳೂರು, ಸೆ.29: ನಗರದ ಪಾಂಡೇಶ್ವರದ ಮಾಲ್‌ವೊಂದರ ಬಳಿ ಪಾರ್ಕ್ ಮಾಡಿದ್ದ ಅಂದಾಜು 1 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ ಕಳವಾಗಿದೆ.
ಲಿಖಿತ್ ಎಂಬವರ ಮಾಲಕತ್ವದ ವಾಹನವನ್ನು ಸೆ.26ರಂದು ಸಂಜೆ 6 ಗಂಟೆಗೆ ಪಾರ್ಕ್ ಮಾಡಲಾಗಿತ್ತು. ರಾತ್ರಿ 7:15ರ ವೇಳೆಗೆ ನೋಡುವಾಗ ಕಳವಾಗಿದೆ. ವಾಹನದ ಸೀಟ್‌ನ ಕೆಳಗಿನ ಬಾಕ್ಸ್‌ನಲ್ಲಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ಪಾನ್ ಕಾರ್ಡ್, ಡೆಬಿಟ್ ಕಾರ್ಡ್‌ಗಳು, ಕಚೇರಿ ಕೀಗಳು ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





