ಆರ್ ಬಿಐ ಎಚ್ಚರಿಕೆ ಹೊರತಾಗಿಯೂ ಯಸ್ ಬ್ಯಾಂಕ್ ನಲ್ಲಿ ಕೇಂದ್ರದಿಂದ 250 ಕೋಟಿ ರೂ. ಹೂಡಿಕೆ

ಹೊಸದಿಲ್ಲಿ, ಸೆ.29: ಭಾರತೀಯ ರಿಸರ್ವ್ ಬ್ಯಾಂಕ್ ನ ಮುನ್ನೆಚ್ಚರಿಕೆಯ ಹೊರತಾಗಿಯೂ ಖಾಸಗಿ ವಲಯದ ಯಸ್ ಬ್ಯಾಂಕ್ ನಲ್ಲಿ ಕೇಂದ್ರ ಸರಕಾರವು 2019-20ನೇ ಹಣಕಾಸು ವರ್ಷದಲ್ಲಿ 250 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯ ವಿತ್ತೀಯ ಪತ್ರದಲ್ಲಿ ತಿಳಿಸಲಾಗಿದೆ.
2017ರಿಂದೀಚೆಗೆ ಆರ್ ಬಿಐ ಬ್ಯಾಂಕ್ ನ ಕಾರ್ಯಚಟುವಟಿಕೆಗಳ ಮೇಲೆ ನಿಗಾವಿರಿಸಿದೆಯೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷ ತಿಳಿಸಿದ್ದರೂ ಸಹ ಕೇಂದ್ರ ಸರಾರ ಯಸ್ ಬ್ಯಾಂಕ್ನ ನಿರಖು ಠೇವಣಿ (ಫಿಕ್ಸಡ್ ಡೆಫಾಸಿಟ್) ಮೇಲೆ ಹೂಡಿಕೆ ಮಾಡಿದೆ ಎಂದು ವಿತ್ತೀಯ ಪತ್ರದಿಂದ ತಿಳಿದುಬಂದಿದೆ.
ಯಸ್ ಬ್ಯಾಂಕ್ ನ ಆಡಳಿತ ನಿರ್ವಹಣೆಯಲ್ಲಿ ಗಂಭೀರವಾದ ಲೋಪದೋಷಗಳನ್ನು ಆರ್ ಬಿಐ 2018ರಲ್ಲೇ ಕೇಂದ್ರದ ಗಮನಕ್ಕೆ ತಂದಿತ್ತು. ಮರುಪಾವತಿಯಾಗದೆ ಉಳಿದ ಸಾಲಗಳ (ಶೇ.7.4)ಬಗ್ಗೆ ವರದಿ ಮಾಡದೆ ಇದ್ದುದಕ್ಕಾಗಿ ಅದು ಯಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು.
Next Story