ಜಪಾನಿನ ನೂತನ ಪ್ರಧಾನಿಯಾಗಿ ಫುಮಿಯೊ ಕಿಶಿಡಾ ಆಯ್ಕೆ
ಟೋಕಿಯೊ,ಸೆ.29: ಜಪಾನಿನ ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿಡಾ ಅವರು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್ಡಿಪಿ)ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು,ದೇಶದ ನೂತನ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.
ಅವರ ಪೂರ್ವಾಧಿಕಾರಿ ಯೋಷಿಹಿದೆ ಸುಗಾ ಅವರು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು,ಕೇವಲ ಒಂದು ವರ್ಷದ ಅಧಿಕಾರದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು.
ಸಂಸತ್ತಿನಲ್ಲಿ ಎಲ್ಡಿಪಿ ಮತ್ತು ಅದರ ಮಿತ್ರಪಕ್ಷ ಬಹುಮತವನ್ನು ಹೊಂದಿದ್ದು,ಕಿಶಿಡಾ ಸೋಮವಾರ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಪ್ರಧಾನಿ ಹುದ್ದೆಗಾಗಿ ಸ್ಪರ್ಧೆಯಲ್ಲಿದ್ದ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಸಾನೆ ಟಿಕಾಯಿಚಿ ಮತ್ತು ಸೀಕೊ ನೊಡಾ ಅವರನ್ನು ಮೊದಲ ಸುತ್ತಿನಲ್ಲಿ ಹಿಂದಿಕ್ಕಿದ ಕಿಶಿಡಾ ಬಳಿಕ ಲಸಿಕೆ ಸಚಿವ ತಾರೊ ಕೊನೊ ಅವರನ್ನು ಹಿಮ್ಮೆಟ್ಟಿಸಿದ್ದರು.
Next Story





