ಮಾದಕ ವಸ್ತು ಮಾರಾಟ ಪ್ರಕರಣ: ನೈಜೀರಿಯಾ ಮೂಲದ ನಟ ಸೆರೆ

ಬೆಂಗಳೂರು, ಸೆ.29: ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ಕನ್ನಡ ಸೇರಿ ವಿವಿಧ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದ ನೈಜೀರಿಯಾ ಮೂಲದ ನಟನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯನ್ ಪ್ರಜೆ ಚಕ್ವಿಮ್ ಮಾಲ್ವಿನ್ ಎಂಬಾತ ನಟ ಎಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿ ಕನ್ನಡ, ಹಿಂದಿ, ತಮಿಳು ಸೇರಿ 20 ಚಿತ್ರಗಳಲ್ಲಿ ಈತ ಸಹನಟನಾಗಿ ನಟಿಸಿದ್ದ. ಅಲ್ಲದೇ, ನೈಜೀರಿಯಾದ ಮೂರು ಚಿತ್ರಗಳಲ್ಲೂ ಅಭಿನಯಿಸಿದ್ದಾನೆ. ಆರೋಗ್ಯ ಕುರಿತ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ ಮುಂಬೈನ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆದಿದ್ದ ಎಂದು ತಿಳಿದುಬಂದಿದೆ.
ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ ಆ್ಯಶಿಶ್ ಆಯಿಲ್ ಹಾಗೂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





