ಐಪಿಎಲ್:ಚೆನ್ನೈ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ 134/7
ಹೇಝಲ್ ವುಡ್ ಗೆ ಮೂರು ವಿಕೆಟ್

photo: twitter.com/IPL
ಶಾರ್ಜಾ: ಜೇಸನ್ ರಾಯ್ ಜೊತೆ ಇನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ವೃದ್ದಿಮಾನ್ ಸಹಾ(44, 46 ಎಸೆತ, 1 ಬೌಂಡರಿ, 2 ಸಿಕ್ಸರ್) ಅವರ ತಾಳ್ಮೆಯ ಇನಿಂಗ್ಸ್ ಸಹಾಯದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 44ನೇ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ಟಾಸ್ ಜಯಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಸನ್ ರೈಸರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. 3.3ನೇ ಓವರ್ ನಲ್ಲಿ ರಾಯ್ ವಿಕೆಟನ್ನು ಕಳೆದುಕೊಂಡ ಸನ್ ರೈಸರ್ಸ್ ಕಳಪೆ ಆರಂಭ ಪಡೆಯಿತು. ನಾಯಕ ಕೇನ್ ವಿಲಿಯಮ್ಸನ್ (11)ಮತ್ತೊಮ್ಮೆ ವಿಫಲರಾದರು. ಅಭಿಷೇಕ್ ಶರ್ಮಾ(18), ಅಬ್ದುಲ್ ಸಮದ್(18) ಹಾಗೂ ರಶೀದ್ ಖಾನ್(17) ಎರಡಂಕೆಯ ಸ್ಕೋರ್ ಗಳಿಸಿದರು.
ಚೆನ್ನೈ ಪರವಾಗಿ ವೇಗದ ಬೌಲರ್ ಜೋಶ್ ಹೇಝಲ್ ವುಡ್(3-24)ಯಶಸ್ವಿ ಪ್ರದರ್ಶನ ನೀಡಿದರು. ಡ್ವೆಯ್ನ್ ಬ್ರಾವೊ(2-17)ವುಡ್ ಗೆ ಸಾಥ್ ನೀಡಿದರು.
Next Story