ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್ ಆಗಿ 100 ಐಪಿಎಲ್ ಕ್ಯಾಚ್ ಪೂರೈಸಿದ ಧೋನಿ

Photo: BCCI / IPL
ಶಾರ್ಜಾ (ಯುಎಇ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಪರವಾಗಿ ವಿಕೆಟ್ ಕೀಪರ್ ಆಗಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗುರುವಾರ 100 ಕ್ಯಾಚ್ ಗಳನ್ನು ಪೂರೈಸಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಸಿಎಸ್ ಕೆ ನಾಯಕ ಮೂರು ಕ್ಯಾಚ್ ಗಳನ್ನು ತೆಗೆದುಕೊಂಡು ಅದ್ಭುತ ಮೈಲಿಗಲ್ಲು ತಲುಪಿದರು.
"ವಿಶೇಷ ಕ್ರಿಕೆಟಿಗ, ವಿಶೇಷ ಮೈಲಿಗಲ್ಲು. ಧೋನಿ ವಿಕೆಟ್ ಕೀಪರ್ ಆಗಿ 100 ಐಪಿಎಲ್ ಕ್ಯಾಚ್ ಗಳನ್ನು ಪೂರೈಸಿದರು ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೀಟಿಸಿದೆ.
Special cricketer, special milestone! @msdhoni completes 1⃣0⃣0⃣ IPL catches for @ChennaiIPL as a wicketkeeper. #VIVOIPL #SRHvCSK
— IndianPremierLeague (@IPL) September 30, 2021
Follow the match https://t.co/QPrhO4XNVr pic.twitter.com/OebX4cuJHq
Next Story