ಮೀನಿನ ವ್ಯಾಪಾರಿಯ ಅಪಹರಣ: ವಿಟ್ಲ ಪೊಲೀಸ್ ಠಾಣೆಗೆ ದೂರು

ಮುಹಮ್ಮದ್ ಅನ್ಸಾರ್
ಬಂಟ್ವಾಳ, ಅ.1: ಕೊಳ್ನಾಡು ಗ್ರಾಮದ ಕೆ.ಪಿ. ಬೈಲು ನಾರ್ಶ ಎಂಬಲ್ಲಿ ಮೀನಿನ ವ್ಯಾಪಾರಿಯೊಬ್ಬರನ್ನು ಅಪರಿಚಿತರ ತಂಡಯೊಂದು ಅಪಹರಣ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಳ್ನಾಡು ಗ್ರಾಮದ ಕೆ.ಪಿ. ಬೈಲು ನಾರ್ಶ ನಿವಾಸಿ ಮುಹಮ್ಮದ್ ಅನ್ಸಾರ್ (34) ಅಪಹರಣಗೊಳಗಾದ ವ್ಯಕ್ತಿಯಾಗಿದ್ದು ಈ ಬಗ್ಗೆ ಅವರ ಪತ್ನಿ ಅಪ್ಸ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಹಮ್ಮದ್ ಅನ್ಸಾರ್ ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಬೇರೆ ವ್ಯವಹಾರ ಮಾಡುತ್ತೇನೆಂದು 2 ತಿಂಗಳ ಹಿಂದೆ ಕೇರಳಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಮರಳಿದ್ದರು. ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭ ಮುಹಮ್ಮದ್ ಅನ್ಸಾರ್ ಅವರನ್ನು ಅಪರಿಚಿತರ ತಂಡ ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





