ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 43 ರೂ. ಏರಿಕೆ

ಹೊಸದಿಲ್ಲಿ: ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು 43.50 ರೂ. ಹೆಚ್ಚಳ ಮಾಡಿವೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಆದಾಗ್ಯೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಬದಲಾವಣೆಯಾಗಿಲ್ಲ.
ಈಗ 19 ಕಿಲೋಗ್ರಾಂಗಳಷ್ಟು ವಾಣಿಜ್ಯ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 1736.50 ರೂ. ಏರಿಕೆ ಆಗಿದೆ.
ಈ ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದಿಲ್ಲಿಯಲ್ಲಿ 1,693 ರೂ. ಆಗಿತ್ತು. ಸೆಪ್ಟೆಂಬರ್ 1 ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 75 ರೂ. ಏರಿಸಲಾಗಿತ್ತು.
Next Story