ಕೇರಳ: ಕಾಲೇಜು ವಿದ್ಯಾರ್ಥಿನಿಯನ್ನು ಇರಿದು ಕೊಂದ ಸಹಪಾಠಿ

Express Photo
ಕೊಚ್ಚಿ: ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಆವರಣದಲ್ಲಿ 22 ರ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಪುರುಷ ಸಹಪಾಠಿಯೊಬ್ಬನು ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಾಲೇಜಿನಲ್ಲಿ ನಡೆದ ಪೂರಕ ಪರೀಕ್ಷೆಯ ನಂತರ ಆರೋಪಿ ಅಭಿಷೇಕ್ ಬೈಜು ಎಂಬಾತ ತನ್ನ ಬ್ಯಾಚ್ಮೇಟ್ ನಿತಿನಮೋಲ್ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿದ್ದ ಹಾಗೂ ಆಕೆಯ ಗಂಟಲನ್ನು ಕತ್ತರಿಸಿದ್ದ ಎಂದು ಪಾಲಾ ಸಬ್ ಇನ್ಸ್ಪೆಕ್ಟರ್ ಅಭಿಲಾಷ್ ಹೇಳಿದ್ದಾರೆ.
ದಾಳಿಯ ಪ್ರತ್ಯಕ್ಷದರ್ಶಿಯಾಗಿದ್ದ ಕಾಲೇಜಿನ ಸೆಕ್ಯುರಿಟಿ-ಗಾರ್ಡ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಆರೋಪಿ ಹಾಗೂ ಬಲಿಪಶು ಯುವತಿ ಆವರಣದ ಒಳಗೆ ಡ್ರೈವ್-ವೇ ಪಕ್ಕದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದನ್ನು ನೋಡಿದೆ. ತದ ನಂತರ ಕ್ಷಿಪ್ರವಾಗಿ ಆತನು ಬಲವಂತವಾಗಿ ಆಕೆಯ ಗಂಟಲನ್ನು ಹಿಡಿದಿರುವುದನ್ನು ನಾನು ನೋಡಿದೆ. ನಾನು ಬ್ಲೇಡ್ ಅನ್ನು ನೋಡಲಿಲ್ಲ. ಆದರೆ ಸೆಕೆಂಡುಗಳ ನಂತರ ರಕ್ತ ಚೆಲ್ಲುವುದನ್ನು ನಾನು ನೋಡಿದೆ. ತಕ್ಷಣವೇ ನಾನು ಪ್ರಾಂಶುಪಾಲರಿಗೆ ಫೋನ್ ಮಾಡಿ ದಾಳಿಯ ಬಗ್ಗೆ ತಿಳಿಸಿದ್ದೆ” ಎಂದು ಅವರು ಹೇಳಿದರು.