ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ 56 ಮಕ್ಕಳಿಗೆ ಉಚಿತ ಸುನ್ನತ್
ಉಡುಪಿ, ಅ.1: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿ ಯಿಂದ ಕಳೆದ 36 ವರ್ಷಗಳಿಂದ ನಡೆಸಲಾಗುತ್ತಿರುವ ಸುನ್ನತ್ ಕಾರ್ಯಕ್ರಮ ವನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗಿತ್ತು. ಕಟಪಾಡಿ ಮಣಿಪುರದ ರಜಬ್ ಉಸ್ತಾದ್ ಸುನ್ನತ್ ನೆರವೇರಿಸಿದರು.
ಉಡುಪಿ, ಸಾಲಿಗ್ರಾಮ, ಹೊಸಂಗಡಿ , ಹೊನ್ನಾಳ, ಉಡುಪಿ ಆಸುಪಾಸಿನ ಮತ್ತು ಉಚ್ಚಿಲ, ಮೂಳುರು, ಪಾಕೀರ್ನಕಟ್ಟೆ ಮತ್ತು ತೋಕೂರಿನ ಬಡ ಮುಸ್ಲಿಂ ಕುಟುಂಬದ ಸುಮಾರು 56 ಮಕ್ಕಳಿಗೆ ಸುನ್ನತ್ ಮಾಡಲಾಯಿತು. ಇದೇ ವೇಳೆ ಬಾಲಕರಿಗೆ ಬಟ್ಟೆ, ಔಷಧಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಫೂರ್ ಕಲ್ಯಾಣಪುರ, ಕಾರ್ಯದರ್ಶಿ ಯು.ಇಬ್ರಾಹಿಂ, ಸದಸ್ಯರುಗಳಾದ ವಿ.ಎಸ್.ಉಮ್ಮರ್, ರಿಯಾಝ್ ಅಹ್ಮದ್, ಮುನೀರ್, ಫರ್ವೆಜ್ಹ್ ಶೇಕ್ ಮೊದಲಾದವರು ಉಪಸ್ಥಿತರಿದ್ದರು.
Next Story





