ಐಎಂಎ ಉಡುಪಿ -ಕರಾವಳಿ ಶಾಖೆ ಅಧ್ಯಕ್ಷರಾಗಿ ಡಾ.ವಿನಾಯಕ ಶೆಣೈ
ಉಡುಪಿ, ಅ.1: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ 2021-2022 ರ ಸಾಲಿನ ಅಧ್ಯಕ್ಷರಾಗಿ ಉಡುಪಿ ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ನಿವೃತ್ತ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಪ್ರಾಧ್ಯಾಪಕ ಡಾ.ಕಲ್ಯಾ ವಿನಾಯಕ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿಯಾಗಿ ಡಾ.ಗಣಪತಿ ಹೆಗ್ಡೆ, ಕೋಶಾಧಿಕಾರಿಯಾಗಿ ಡಾ.ಶರತ್ಚಂದ್ರ ರಾವ್, ಉಪಾಧ್ಯಕ್ಷರಾಗಿ ಡಾ.ಪಿ.ವಿ.ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ವಿಜಯಾ(ಜೊತೆ ಕಾರ್ಯದರ್ಶಿ), ಡಾ.ದೀಪಕ್ ಮಲ್ಯ(ಸಹ ಕೋಶಾಧಿಕಾರಿ), ಡಾ.ಸುದರ್ಶನ ರಾವ್, ಡಾ.ಗುರುಮೂರ್ತಿ ಭಟ್, ಡಾ.ಕೇಶವ್ ನಾಯಕ್, ಡಾ.ಮುರಿಳಿಧರ ಪಾಟೀಲ್, ಡಾ.ಅಶೋಕ್ ಕುಮಾರ್ ಓಕುಡೆ, ಡಾ.ರಾಜೇಶ್ ಭಕ್ತ, ಡಾ.ಉಮೇಶ್ ನಾಯಕ್, ಡಾ. ರಾಜಗೊಪಾಲ್ ಭಾಂಡಾರಿ, ಡಾ.ಸುನೀಲ್ ಮುಂಡ್ಕೂರ್, ಡಾ.ಜಯಪ್ರಕಾಶ್ ಬೆಳ್ಳೆ, ಡಾ.ರಾಕೇಶ್ ಅಡಿಗ, ಡಾ.ಹರೀಶ್ ನಾಯಕ್, ಡಾ.ನಾಗರತ್ನ, ಡಾ. ಆಮ್ನಾ ಹೆಗ್ಡೆ, ಡಾ.ವಿಜಯಲಕ್ಷ್ಮೀ ನಾಯಕ್, ಡಾ.ಇಂದಿರಾ ಪೈ ಶಾನಭಾಗ್, ಡಾ.ಅರ್ಜುನ್ ಬಲ್ಲಾಳ್, ಡಾ.ಸುಜಿತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಇವರು ನಿಕಟಪೂರ್ವ ಅಧ್ಯಕ್ಷ ಡಾ.ಉಮೇಶ್ ಪ್ರಭು ಅವರಿಂದ ಅ.31ರಂದು ನಡೆಯುವ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಳ್ಳಲಿರುವರು ಎಂದು ಪ್ರಕಟಣೆ ತಿಳಿಸಿದೆ.





