ಮಾಹೆ ಆನ್‌ಲೈನ್ ಭಾಷಣ ಸ್ಪರ್ಧೆಯ ವಿಜೇತರು
ಮಣಿಪಾಲ, ಅ.1: ಕೇಂದ್ರ ಸರಕಾರದ ಸಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ ವಿದ್ಯಾರ್ಥಿ ವ್ಯವಹಾರ ವಿಭಾಗ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ‘ನಶಾಮುಕ್ತ ಉಡುಪಿ ಅಭಿಯಾನ’ದ ಭಾಷಣ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ವಿದ್ಯಾರ್ಥಿಗಳಿಗಾಗಿ 8ನೇ ತರಗತಿಯಿಂದ 12 ಹಾಗೂ ಪದವಿ ವಿಭಾಗ, ಅಧ್ಯಾಪಕರ ವಿಭಾಗ ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆಗಳು ಆನ್‌ಲೈನ್‌ನಲ್ಲಿ ನಡೆದಿದ್ದವು.
ವಿದ್ಯಾರ್ಥಿಗಳಿಗೆ ‘ಉಡುಪಿಯನ್ನು ನಶಾಮುಕ್ತ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ’, ಅಧ್ಯಾಪಕರಿಗೆ ‘ಉಡುಪಿಯನ್ನು ನಶಾ ಮುಕ್ತಗೊಳಿಸುವಲ್ಲಿ ಅಧ್ಯಾಪಕರ ಪಾತ್ರ’ ಹಾಗೂ ಸಾರ್ವಜನಿಕರಿಗೆ ‘ಉಡುಪಿ ನಶಾಮುಕ್ತವಾಗುವಲ್ಲಿ ನಾಗರಿಕರ ಪಾತ್ರ’ ಎಂಬ ವಿಷಯಗಳನ್ನು ನೀಡಲಾಗಿತ್ತು. ಒಟ್ಟು 46 ಮಂದಿ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ, ಭಾಗವಹಿಸಿ ದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಹಾಗೂ ಅಭಿಯಾನದ ಸಂಚಾಲಕಿ ಡಾ.ಗೀಾ ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಗಳ ವಿಜೇತರು: ಸಾರ್ವಜನಿಕ ವಿಭಾಗ: 1.ರಂಜಿತ್ ರಾಧಾಕೃಷ್ಣ ಶೆಟ್ಟಿ, ಅಧ್ಯಾಪಕರ ವಿಭಾಗ: 1.ಸ್ಮಿತಾ ಯು.(ಜ್ಞಾನಗಂಗಾ ಪ.ಪೂ.ಕಾಲೇಜು).
ವಿದ್ಯಾರ್ಥಿಗಳ ವಿಭಾಗ: 8ರಿಂದ 12ನೇ ತರಗತಿ-1.ನವ್ಯ, ದ್ವಿ.ಪಿಯು., ಜ್ಞಾನಗಂಗಾ ಪ.ಪೂ.ಕಾಲೇಜು, 2.ಅನಘಶ್ರೀ, 8ನೇ ತರಗತಿ ಶ್ರೀಅನಂತೇಶ್ವರ ಪ್ರೌಢ ಶಾಲೆ ಉಡುಪಿ ಹಾಗೂ ಎಸ್.ಶ್ರೀರಾಮ್ ಎಂ.ಆರ್.ಭಟ್, 9ನೇ ತರಗತಿ, ಶ್ರೀಅನಂತೇಶ್ವರ ಪ್ರೌಢ ಶಾಲೆ ಉಡುಪಿ.
ಪದವಿ ತರಗತಿ: 1.ಅನ್ನಪೂರ್ಣಾ, ಬಿಎಸ್ಸಿ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ, 2.ಲೆರಿಸಾ ಡಿಸೋಜ, ಬಿ.ಎ., ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮಣಿಪಾಲ







