ಎಂಎಸ್‌ಎನ್‌ಐಎಂನಲ್ಲಿ ‘ಸಂದರ್ಶನ ಸಿದ್ಧತೆ’ ಕಾರ್ಯಾಗಾರ

ಮಂಗಳೂರು, ಅ.1: ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ತನ್ನ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗಾಗಿ ಸಂದರ್ಶನ ಸಿದ್ಧತೆ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ನಗರದ ಬೊಂದೆಲ್‌ನ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿತು.
ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಪ್ರೊ ಕಂಪೆನಿಯ ಪ್ರಾಕ್ಟೀಸ್ ಹೆಡ್ ಮೋಹನ್ ಕುಮಾರ್, ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನ ಬೆಳೆಸುವುದು, ಉದ್ಯೋಗ ಕೌಶಲ್ಯ, ಉದ್ಯೋಗ ಶೋಧ, ವೃತ್ತಿ ಅನ್ವೇಷಣೆ, ರೆಸ್ಯೂಮ್ ಬರೆಯುವುದು, ಉದ್ಯೋಗ ಸಂದರ್ಶನ ಎದುರಿಸುವುದು ಮತ್ತು ಉದ್ಯೋಗ ಪಡೆಯಲು ಮತ್ತು ಉಳಿಸಿಕೊಳ್ಳಲು ಸಹಾಯಕವಾಗುವ ಉದ್ಯೋಗ ಯಶಸ್ಸಿನ ಕೌಶಲ್ಯ ಬೆಳೆಸುವುದು ಇತ್ಯಾದಿಗಳನ್ನು ಕಲಿಯುವುದೇ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ರಚಿಸಲಾಯಿತು. ಪ್ರಸ್ತುತ ವಿಷಯಗಳ ಮೇಲೆ ಪ್ರಾಯೋಗಿಕ ಗುಂಪು ಚರ್ಚೆ ನಡೆಸಲಾಯಿತು. ಕುಮಾರ್ ವಿದ್ಯಾರ್ಥಿಗಳ ಬಯೋಡಾಟಾ ಪರಿಶೀಲಿಸಿದರು. ವೃತ್ತಿಪರ ರೆಸ್ಯೂಮ್‌ಗಳನ್ನು ಹೇಗೆ ಬರೆಯಬೇಕು ಎಂಬುದರ ಕುರಿತು ಸಲಹೆ ನೀಡಿದರು. ಲಿಂಕ್ಡ್‌ಇನ್ ಪ್ರೊಫೈಲ್‌ಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಕೌಶಲ್ಯವನ್ನು ಚುರುಕುಗೊಳಿಸಲು ಮಾನವ ಸಂಪನ್ಮೂಲ, ಮಾರ್ಕೆಟಿಂಗ್ ಮತ್ತು ಹಣಕಾಸು ವಿಷಯಗಳಲ್ಲಿ ಅಣಕು ಸಂದರ್ಶನಗಳು ಮತ್ತು ಪರೀಕ್ಷೆಗಳನ್ನು ನಡೆಸಲಾಯಿತು.
ಪ್ರೊ.ಮುದ್ದಾಸಿರ್ ಖಾದರ್ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪ್ರೊ.ದಿವ್ಯಾ ಶೆಟ್ಟಿ ವಂದಿಸಿದರು. ಪ್ರೊ.ರಿಧ್ವಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
.jpg)







