ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು: ನಾಸಿರ್ ಸಾಮಣಿಗೆ

ಕೊಣಾಜೆ: ಕೊರೋನ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳಿಗೆ ಹಿನ್ನಡೆಯಾಗಿರುವಂತೆ ಶಿಕ್ಷಣ ಕ್ಷೇತ್ರ ಹಾಗೂ ವಿದ್ಯಾರ್ಥಿಗಳಿಗೂ ಬಹಳಷ್ಟು ತೊಂದರೆ ಗಳು ಎದುರಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಆಗಬೇಕಿದೆ ಎಂದು ಹ್ಯೂಮಾನಿಟಿ ಫೌಂಡೇಶನ್ ನಾಸಿರ್ ಸಾಮಣಿಗೆ ಹೇಳಿದರು.
ಅವರು ಹ್ಯೂಮಾನಿಟಿ ಫೌಂಡೇಶನ್ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಕಲ್ಲರಕೊಡಿ ನರಿಂಗಾನ ಇದರ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್, ಶಾಲೆಯ ಮುಖ್ಯ ಅದ್ಯಾಪಕಿ ಸೀಮಾ ಮರಿಯಾ ಡಿಸೊಜ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಸಂಚಾಲಕರಾದ ಶಂಶೀರ್ ಕುತ್ತಾರ್,ಅಜೀಜ್ ಮದ್ಪಾಡಿ, ಅದ್ಯಾಪಕ ರಾದ ವಿನಿತ,ಪುಷ್ಪ, ಸಂತೊಷ್,ಪ್ರಭಾಕರ್ ಮತ್ತು ಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
Next Story









