ವಾಯು ಪಡೆ ವೈಸ್ ಮಾರ್ಷಲ್ ಆಗಿ ಸಂದೀಪ್ ಸಿಂಗ್ ಅಧಿಕಾರ ಸ್ವೀಕಾರ

Photo: PTI
ಹೊಸದಿಲ್ಲಿ, ಅ. 1: ಭಾರತೀಯ ವಾಯು ಪಡೆಯ ನೂತನ ವೈಸ್ ಮಾರ್ಷಲ್ ಆಗಿ ಸಂದೀಪ್ ಸಿಂಗ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. 27ನೇ ಚೀಫ್ ಮಾರ್ಷಲ್ ಆಗಿ ವಿ.ಆರ್. ಚೌಧರಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ, ತೆರವಾದ ಸ್ಥಾನಕ್ಕೆ ಸಿಂಗ್ ನಿಯೋಜನೆಯಾಗಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಿರಿಯ ವಿದ್ಯಾರ್ಥಿಯಾಗಿರುವ ಅವರು ಭಾರತೀಯ ವಾಯು ಪಡೆಯ ವಿಮಾನ ಹಾರಾಟ ವಿಭಾಗದಲ್ಲಿ ಯುದ್ಧ ವಿಮಾನದ ಪೈಲೆಟ್ ಆಗಿ 1983ರಲ್ಲಿ ನಿಯೋಜನೆಯಾಗಿದ್ದರು. ಭಾರತೀಯ ವಾಯು ಪಡೆಯ 38 ವರ್ಷಗಳ ಸೇವಾವಧಿಯಲ್ಲಿ ಸಿಂಗ್ ಅವರು ಏರ್ ಕ್ರಾಫ್ಟ್, ಸಿಸ್ಟಮ್ ಟೆಸ್ಟಿಂಗ್, ಮುಂಚೂಣಿ ವಾಯು ನೆಲೆ ಹಾಗೂ ಆಪರೇಷನ್ ಫೈಟರ್ ಸ್ಕ್ವಾರ್ಡನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಸಿಂಗ್ ಅವರು 4,400 ಗಂಟೆ ಕಾಲ ವಿಮಾನ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.
Next Story





