ಮಹಾತ್ಮ ಗಾಂಧಿ ಅವರ ಉದಾತ್ತ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿವೆ : ಪ್ರಧಾನಿ ಮೋದಿ

photo: ANI
ಹೊಸದಿಲ್ಲಿ: ರಾಜ್ ಘಾಟ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು. ಶನಿವಾರ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ ಪಿಎಂ ಮೋದಿ ಅವರು ಬಾಪು ಅವರ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿವೆ ಹಾಗೂ ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು.
"ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವಗಳು. ಪೂಜ್ಯ ಬಾಪು ಅವರ ಜೀವನ ಹಾಗೂ ಆದರ್ಶಗಳು ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿದೆ. ಅವರ ತತ್ವಗಳು ಜಾಗತಿಕವಾಗಿ ಪ್ರಸ್ತುತವಾಗಿವೆ ಹಾಗೂ ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತದೆ"ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
Next Story