ಹೊಸದಿಲ್ಲಿ: ಕರ್ನಾಟಕ ಭವನದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ ಶಾಸ್ತ್ರೀ ಜನ್ಮದಿನಾಚರಣೆ

ಹೊಸದಿಲ್ಲಿ, ಅ.2: ಇಲ್ಲಿನ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ-1ರ ‘ಕಾವೇರಿ’ಯಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಸುಪ್ರಿಂಕೋರ್ಟಿನ ನ್ಯಾಯಾಧೀಶರಾದ ನ್ಯಾ.ಅಭಯ ಎಸ್. ಓಕಾ, ನ್ಯಾ. ಬಿ.ವಿ.ನಾಗರತ್ನಾ ಹಾಗೂ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾದ ನ್ಯಾ. ಅರವಿಂದ ಕುಮಾರ್ ಹಾಗೂ ನ್ಯಾ. ಅಲೋಕ ಆರಾಧ್ಯ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತ ವಿಜಯ ರಂಜನ್ ಸಿಂಗ್, ಉಪ ನಿವಾಸಿ ಆಯುಕ್ತ ಎಚ್.ಪ್ರಸನ್ನ ಹಾಗೂ ಕರ್ನಾಟಕ ಭವನದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Next Story





